ಬಿಎಚ್‌ಇಎಲ್ ಮಹಿಳಾ ಲೆಕ್ಕಾಧಿಕಾರಿ ಆತ್ಮಹತ್ಯೆ 

 ಹೈದರಾಬಾದ್ : ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟಿಕಲ್ಸ್ ಲಿಮಿಟೆಡ್ ( ಬಿಎಚ್‌ಇಎಲ್ ) ಸಂಸ್ಥೆಯ ಮಹಿಳಾ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಸಂಸ್ಥೆಯ ಉನ್ನತ | 
ಅಧಿಕಾರಿಗಳು ಹಾಗೂ ಆರು ಮಂದಿ ಸಹೋದ್ಯೋಗಿಗಳ ಕಿರುಕುಳ ಇದಕ್ಕೆ ಕಾರಣ ಎಂದು ಆಪಾದಿಸಲಾಗಿದೆ . ಮೃತ ಮಹಿಳೆಯ ಪತಿ ನೀಡಿದ ದೂರಿನ ಮೇಲೆ ಬಿಎಚ್‌ಇಎಲ್ ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಆರು ಮಂದಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೆದನೆ ನೀಡಿದ ಪ್ರಕರಣ ದಾಖಲಾಗಿದೆ . ಭೋಪಾಲ್ ಮೂಲದ ಮಹಿಳೆ ತಮ್ಮ ಮನೆಯ ಬೆಡ್‌ರೂಂನಲ್ಲಿ ವೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ . ಪತಿ ಹಾಗೂ ಕುಟುಂಬ ಸದಸ್ಯರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಸೀಲಿಂಗ್ ಫ್ಯಾನ್‌ನಲ್ಲಿ ಶವ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ . ಡಿಜಿಎಂ ಹಾಗೂ ಆರು ಮಂದಿ ಸಹೋದ್ಯೋಗಿಗಳು ನೀಡುತ್ತಿದ್ದ ಮಾನಸಿಕ ಕಿರುಕುಳ ಈ ನಿರ್ಧಾರಕ್ಕೆ ಕಾರಣ ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ಮಹಿಳೆ ವಿವರಿಸಿದ್ದಾರೆ . ಮೊಬೈಲ್ ಫೋನ್ ಹ್ಯಾಕ್ ಮಾಡಿ ಎಲ್ಲ ಕರೆಗಳನ್ನು ಕದ್ದಾಲಿಸಲಾಗುತ್ತಿತ್ತು ಹಾಗೂ ಬೇಹುಗಾರಿಕೆ ಮಾಡಲಾಗುತ್ತಿತ್ತು . ಇಷ್ಟು ಮಾತ್ರವಲ್ಲದೇ ಅಶ್ಲೀಲವಾಗಿ ಮಾತನಾಡಲಾಗುತ್ತಿತ್ತು . ಭೋಪಾಲ್‌ಗೆ ವರ್ಗಾವಣೆಯಾದ ಸಂದರ್ಭ ಕೆಲ ಸಹೋದ್ಯೋಗಿಗಳು ಕಿರುಕುಳ ನೀಡಿದ್ದರು ಎಂದು ಪತ್ರದಲ್ಲಿ ಹೇಳಿದ್ದಾರೆ . 

Please follow and like us:
error