ಬಾಂಗ್ಲಾ ಸೈನಿಕರ ದಾಳಿಗೆ ಯೋಧ ಬಲಿ

ಕೊಲ್ಕತ್ತಾ , : ಪಶ್ಚಿಮ ಬಂಗಾಳದ ಗಡಿ ಸಮೀಪ | ಬಾಂಗ್ಲಾದೇಶಿ ಗಡಿ ಭದ್ರತಾ ಪಡೆ ಗುಂಡು ಹಾರಾಟ ನಡೆಸಿದ ಪರಿಣಾಮ 
ಬಿಎಸ್ ಎಫ್ ಯೋಧರೊಬ್ಬರು ಮೃತಪಟ್ಟಿದ್ದು , ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ . ದಾಳಿಯಲ್ಲಿ ಗಾಯಗೊಂಡ ಯೋಧರೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ . ” ಇಂದು ಬೆಳಗ್ಗೆ ಗಡಿ ಸಮೀಪವಿರುವ ಪದ್ಮಾ ನದಿಯಲ್ಲಿ ಮೀನುಗಾರಿಕೆಗೆಂದು ಮೂವರು ಭಾರತೀಯ ಮೀನುಗಾರರು ತೆರಳಿದ್ದರು . ನಂತರ ಅವರು ಬಿಎಸ್ ಎಫ್ ಪೋಸ್ಟ್ ಗೆ ಬಂದು ಬಾಂಗ್ಲಾ ಸೈನಿಕರು ತಮ್ಮನ್ನು ಸೆರೆಹಿಡಿದಿದ್ದಾರೆ . ಆನಂತರ ಇಬ್ಬರನ್ನು ಬಿಡುಗಡೆಗೊಳಿಸಿದರು ಎಂದು ತಿಳಿಸಿದರು ‘ ಎಂದು ಬಿಎಸ್ ಎಫ್ ಪ್ರಕಟನೆಯಲ್ಲಿ ತಿಳಿಸಿದೆ . ರಃ ಘಟನೆಗೆ ಸಂಬಂಧಿಸಿ ಮಾತುಕತೆಗಾಗಿ ಬಾಂಗ್ಲಾ ಆಹ್ವಾನಿಸಿತು . ಪೊಸ್ಟ್ ಕಮಾಂಡರ್ ಮತ್ತು ಐವರು ಯೋಧರು ಬಿಎಸ್ ಎಫ್ ಬೋಟ್ ನಲ್ಲಿ ತೆರಳಿದರು . ಬಾಂಗ್ಲಾ ಗಡಿ ಭದ್ರತಾ ಪಡೆಗಳೊಂದಿಗೆ ಮಾತುಕತೆ ನಡೆಯಿತು . ಆದರೆ ಬಾಂಗ್ಲಾ ಪಡೆಗಳು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಒಪ್ಪದೆ , ಬಿಎಸ್ ಎಫ್ ಯೋಧರನ್ನು ಸುತ್ತುವರಿದರು ಎನ್ನಲಾಗಿದೆ . ” ಪರಿಸ್ಥಿತಿ ಸರಿಯಿಲ್ಲ ಎಂದರಿತ ಬಿಎಸ್ ಎಫ್ ತಂಡ ಕೂಡಲೇ ಅಲ್ಲಿಂದ ಹಿಂದಿರುಗಿತು . ಹಿಂದಿರುಗುತ್ತಿದ್ದ ಬಿಎಸ್ ಎಫ್ ಸೈನಿಕರ ಮೇಲೆ ಅವರು ಗುಂಡಿನ ಮಳೆಗರೆದರು ” ಎಂದು ಬಿಎಸ್ ಎಫ್ ತಿಳಿಸಿದೆ . ಕೂಡಲೇ ಇಬ್ಬರು ಯೋಧರನು ಸಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು . ಆದರೆ ಹೆಡ್ ಕಾನ್ ಸ್ಟೇಬಲ್ ವಿಜಯ್ ಭಾನ್ ಸಿಂಗ್ ಮೃತಪಟ್ಟರು ಎಂದು ಬಿಎಸ್ ಎಫ್ ಮಾಹಿತಿ ನೀಡಿದೆ .

Please follow and like us:

Related posts