ಪೌರತ್ವ ಕಾಯ್ದೆ ಸಾವರ್ಕರ ಆಶಯಗಳಿಗೆ ವಿರುದ್ದ- ಉದ್ಭವ ಠಾಕ್ರೆ

ಮುಂಬೈ , ಡಿ . 15 : ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆಯು ಸಿಂಧು ನದಿಯಿಂದ ಹಿಡಿದು ಕನ್ಯಾಕುಮಾರಿವರೆಗಿನ ನೆಲವನ್ನು ಒಂದು ರಾಷದಡಿ ತರಲು ಬಯಸಿದ ಹಿಂದುತ್ವ ಸಿದ್ದಾಂತಿ ವಿ . ಡಿ . ಸಾವರ್ಕರ್ ಅವರ ಅಭಿಪ್ರಾಯಗಳಿಗೆ ವಿರುದ್ಧವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರವಿವಾರ ಇಲ್ಲಿ ಹೇಳಿದರು . ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ 
ಮಾತನಾಡಿದ ಅವರು , ಮಹಿಳೆಯರ ಸುರಕ್ಷತೆ , ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟಿನಂತಹ | ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪೌರತ್ವ ತಿದ್ದುಪಡಿ ಮಸೂದೆಯಂತಹ ವಿಷಯಗಳನ್ನು ಎತ್ತಲಾಗುತ್ತಿದೆ ಎಂದರು . ಸಿಂಧು ನದಿಯಿಂದ ಹಿಡಿದು ಕನ್ಯಾಕುಮಾರಿವರೆಗಿನ ನೆಲವನ್ನು ಒಂದು ರಾಷ್ಟ್ರದಡಿ ತರಲು ಸಾವರ್ಕರ್ ಆಗ್ರಹಿಸಿದ್ದರು . ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅದಕ್ಕೆ ಬದಲಾಗಿ ಅವರ ಆಶಯವನ್ನು ಉಲ್ಲಂಘಿಸಿ , ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರನ್ನು ಭಾರತದೊಳಗೆ ಬರಮಾಡಿಕೊಳ್ಳುತ್ತಿದೆ . ಇದು ಸಾವರ್ಕರ್ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು . ಸಾವರ್ಕರ್ ಕುರಿತು ಶಿವಸೇನೆಯ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಠಾಕ್ರೆ ಈ ಸಂದರ್ಭದಲ್ಲಿ | ಸ್ಪಷ್ಟಪಡಿಸಿದರು .

Please follow and like us:
error