ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ : ಆರ್ ಟಿಐ ಕಾರ್ಯಕರ್ತ ಅಖಿಲ್ ಗೊಗೊಯಿ ವಿರುದ್ಧ ಯುಎಪಿಎ ಹೇರಿದ ಎನ್‌ಐಎ

 ಹೊಸದಿಲ್ಲಿ : ಗುರುವಾರ ಮುನ್ನೆಚ್ಚರಿಕಾ ಕ್ರಮವಾಗಿ 

ಬಂಧಿಸಲ್ಪಟ್ಟಿದ್ದ ಅಸ್ಸಾಂನ ಆರ್ ಟಿಐ ಕಾರ್ಯಕರ್ತ ಹಾಗೂ ರೈತ ನಾಯಕ ಅಖಿಲ್ ಗೊಗೋಯಿ ಅವರ ವಿರುದ್ಧ ತಿದ್ದುಪಡಿಗೊಂಡ ಯುಎಪಿಎ ( ಅಕ್ರಮ ಕೂಟ ನಿರ್ಬಂಧ ಕಾಯಿದೆ ) ಅನ್ವಯ ಎನ್ ಐಎ ಪ್ರಕರಣ ದಾಖಲಿಸಿದೆ . ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳ ನಡುವೆ ಗುರುವಾರ ಅವರನ್ನು ಅಸ್ಸಾಂನ ಜೋರ್ಹಟ್ ಜಿಲ್ಲೆಯಿಂದ ಬಂಧಿಸಲಾಗಿತ್ತು . ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯ ಸಲಹೆಗಾರರಾಗಿರುವ ಅವರು ವಿವಾದಿತ ಕಾಯ್ದೆಯ ವಿರುದ್ದ ಜೋರ್ಹಟ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು . ಅವರು ಪೊಲೀಸರಿಂದ ತಪ್ಪಿಸಿಕೊಂಡಿದ್ದರೂ ವಕೀಲರೊಬ್ಬರ ನಿವಾಸದಲ್ಲಿ ಕೊನೆಗೆ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ . ತಿದ್ದುಪಡಿಗೊಂಡ ಯುಎಪಿಎ ಅನ್ವಯ ಬಂಧಿಸಲ್ಪಟ್ಟ ಮೊದಲ ವ್ಯಕ್ತಿ ಗೊಗೊಯಿ ಆಗಿದ್ದಾರೆ . ಯಾರಾದರೂ ಉಗ್ರ ಚಟುವಟಿಕೆಗೆ ಸಿದ್ಧತೆ ನಡೆಸುತ್ತಿದ್ದರೆ ಯಾ ಶಾಮೀಲಾಗಿದ್ದರೆ ಈ ಕಾಯ್ದೆಯು ಯಾವುದೇ ವ್ಯಕ್ತಿಯನ್ನು ಉಗ್ರನೆಂದು ಪರಿಗಣಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ . ಎನ್‌ಐಎ ಮಹಾನಿರ್ದೇಶಕರನ್ನು ಗುವಾಹಟಿಯ ಹಿಂಸೆಯನ್ನು ಹತ್ತಿಕ್ಕಲು ಕೇಂದ್ರ ಕಳುಹಿಸಿದ ನಂತರ ಗೊಗೊಯಿ ಬಂಧನವಾಗಿದೆ . ಅಖಿಲ್ ಗೊಗೊಯಿ ಅವರು 2005ರಲ್ಲಿ ತಮ್ಮ ತವರು ಜಿಲ್ಲೆ ಗೋಲಾಘಾಟ್‌ನಲ್ಲಿ ಪಿಡಿಎಸ್ ಹಗರಣ ಬಯಲುಗೊಳಿಸಿ ಸುದ್ದಿ ಮಾಡಿದ್ದರು . ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಅವರು 2008ರಲ್ಲಿ ಷಣ್ಮುಗಮ್ ಮಂಜುನಾಥ್ ಇಂಟೆಗ್ರಿಟಿ ಅವಾರ್ಡ್ ಹಾಗೂ 2010ರಲ್ಲಿ ಪಬ್ಲಿಕ್ ರಿಸರ್ಚ್ ಫೌಂಡೇಶನ್‌ನ ಆರ್ ಟಿಐ ಪ್ರಶಸ್ತಿ ಪಡೆದಿದ್ದರು .

Please follow and like us:
error