” ಪೌರತ್ವ ಕಾಯ್ದೆ , ಎನ್ ಆರ್ ಸಿ ದೇಶದ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ ” ದಿಗ್ಬಂದನ ಕೇಂದ್ರಗಳಿವೆ ಎನ್ನುವುದು ಸುಳ್ಳು : ಪ್ರಧಾನಿ ಮೋದಿ

ಹೊಸದಿಲ್ಲಿ : ವಿವಿಧತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯ ಎಂದ ಪ್ರಧಾನಿ ನರೇಂದ್ರ ಮೋದಿ , ನೀವು ಮೋದಿಯನ್ನು ದ್ವೇಷಿಸಿ , ಆದರೆ ಭಾರತವನ್ನು ದ್ವೇಷಿಸಬೇಡಿ ಎಂದರು . ” ನಾನು ಜನರ ಹಕ್ಕುಗಳನ್ನು ಕಸಿಯುತ್ತೇನೆಂಬ ಸುಳ್ಳು ಆರೋಪಗಳನ್ನು ದೇಶವು ಒಪ್ಪುವುದಿಲ್ಲ . ಕಾಯ್ದೆಯನ್ನು ಸಂಪೂರ್ಣವಾಗಿ ಓದುವಂತೆ ಮತ್ತು ನಗರ ನಕ್ಸಲರು ಮತ್ತು ಕಾಂಗ್ರೆಸ್ ಹರಡುತ್ತಿರುವ ದಿಗ್ಟಂಧನ ಕೇಂದ್ರಗಳೆಂಬ ಸುಳ್ಳುಗಳನ್ನು ನಂಬದಂತೆ ನಾನು ಯುವಜನತೆಯಲ್ಲಿ ಮನವಿ ಮಾಡುತ್ತಿದ್ದೇನೆ . ಇದು ಸುಳ್ಳು ಮತ್ತು ದೇಶವನ್ನು ಒಡೆಯುತ್ತಿದೆ ‘ ಎಂದವರು ಹೇಳಿದರು . ” ದೇಶದ ಮುಸ್ಲಿಮರು ಹೆದರಬೇಕಾಗಿಲ್ಲ . ಪೌರತ್ವ ಕಾಯ್ದೆ ಮತ್ತು ಎನ್ ಆರ್ ಸಿ ದೇಶದ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ . ಪೌರತ್ವ ಕಾಯ್ದೆಯು ದೇಶದ ಬಡವರ ವಿರುದ್ದ ಎಂದು ಕೆಲವರು ಹೇಳುತ್ತಿದ್ದಾರೆ . ಇತ್ತೀಚಿನ ಕೆಲ ವರ್ಷಗಳಿಂದ ವಾಸಿಸುತ್ತಿರುವವರಿಗಷ್ಟೇ ಕಾಯ್ದೆ ಅನ್ವಯವಾಗುತ್ತದೆ . ಯಾವುದೇ ಹೊಸ ನಿರಾಶ್ರಿತರಿಗೆ ಪೌರತ್ವ ಕಾಯ್ದೆಯಿಂದ ಪ್ರಯೋಜನವಿಲ್ಲ ” ಎಂದವರು ಹೇಳಿದರು .

Please follow and like us:
error