ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ – ಕಮಲ್ ಹಾಸನ್

ಬಹುಭಾಷಾ ನಟ, ಮಕ್ಕಳ್‌ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್‌ ಇಂದು ತಮ್ಮ 66 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ಸಂದರ್ಭದಲ್ಲಿ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ

”ಮಕ್ಕಳ್ ನೀದಿ ಮಯ್ಯಂ” ಎಂಬ ರಾಜಕೀಯ ಪಕ್ಷ ಕಟ್ಟಿರುವ ಕಮಲ್ ಹಾಸನ್, ಆಳುವ ಸರ್ಕಾರಗಳನ್ನು, ನೀತಿಗಳನ್ನು ಪ್ರಶ್ನಿಸುತ್ತಾ ಬಂದಿದ್ದಾರೆ. ಅದರಲ್ಲಿಯೂ ಭಾವನಾತ್ಮಕ ವಿಚಾರಗಳನ್ನಿಟ್ಟು ರಾಜಕೀಯ ಮಾಡುವುದನ್ನು ಕಮಲ್ ಖಂಡತುಂಡವಾಗಿ ವಿರೋಧಿಸಿದ್ದಾರೆ. ಹಾಗಾಗಿಯೇ ದೇವರು, ಧರ್ಮದ ಹೆಸರಿನಲ್ಲಿ ಓಟು ಕೇಳುವುದಕ್ಕೆ ಅವರ ವಿರೋಧವಿದೆ. ಹೌದು ನಾನು ಗೋಮಾಂಸ ತಿಂದಿದ್ದೇನೆ, ಏನೀಗ? ಏನು ತಿನ್ನಬೇಕೆನ್ನುವುದು ಜನರ ಆಯ್ಕೆ. ಅದನ್ನು ಕೇಳಲು ನೀವ್ಯಾರು ಎಂದು ಕಮಲ್ ಹಾಸನ್ ಈ ಹಿಂದೆ ಪ್ರಶ್ನಿಸಿದ್ದರು.

“ನಾಸ್ತಿಕತೆ ನಿಮ್ಮ ಸಿದ್ಧಾಂತ ಎಂದು ಕೇಳುತ್ತಾರೆ ಅಲ್ಲ ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ ಎಂದು ಹೇಳುತ್ತೇನೆ. ಈಗ ನನ್ನ ಮುಂದೆ ದೇವರು ಪ್ರತ್ಯಕ್ಷನಾದರೂ ಸಹ ನಾನು ಪೂಜಿಸುವುದಿಲ್ಲ” ಎಂದು 2015ರಲ್ಲಿ ಅವರು ಹೇಳಿಕೆ ನೀಡಿದ್ದರು. ಅವರ ಇನ್ನಿತರ ಪ್ರಸಿದ್ದ ಹೇಳಿಕೆಗಳು ಕೆಳಗಿನಂತಿವೆ.

“ನಾನು 21 ನೇ ಶತಮಾನದ ಮನುಷ್ಯ. ನಾನು ವೈಭವವನ್ನು ನಂಬುವುದಿಲ್ಲ. ಶ್ರಮ, ಕಣ್ಣೀರು, ಜೀವನ ಮತ್ತು ಮರಣವನ್ನು ಮಾತ್ರ ಸತ್ಯವೆಂದು ನಂಬುತ್ತೇನೆ”.

‘ಸಾಕ್ರಟೀಸ್‌ನ ಮಗನಾದ ನನಗೆ ಒಂದು ಕಪ್ ವಿಷವನ್ನು ಕೊಟ್ಟರೂ ಸಂತೋಷದಿಂದ ಕುಡಿಯುತ್ತೇನೆ. ಆದರೆ ನಾನು ಸಾಯುವವರೆಗೂ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತೇನೆ’ ಎನ್ನುವ ಮೂಲಕ ಕಮಲ್ ಗಮನಸೆಳೆದಿದ್ದರು.

“ನನ್ನ ಮೇಲೆ ಬುದ್ಧನ ಪ್ರಭಾವ ಇದೆ, ವಿಶ್ವದ ಅತಿದೊಡ್ಡ ವೈಚಾರಿಕ ವ್ಯಕ್ತಿ ಬುದ್ಧನನ್ನೂ ಸಹ ಜನರು ದೇವರನ್ನಾಗಿ ಮಾಡಿದ್ದಾರೆ” ಎಂದು ಕಮಲ್ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.

“ನಾನು, ನನಗಿಂತ ಮೊದಲು ಇದ್ದವರಿಗಿಂತಲೂ ಹೆಚ್ಚಿನದನ್ನು ಯೋಚಿಸಲು ಸಾಧ್ಯವಾದರೆ ಮಾತ್ರ ಭವಿಷ್ಯದ ಪೀಳಿಗೆಗಳು ನನಗಿಂತ ಹೆಚ್ಚಿನದನ್ನು ಯೋಚಿಸಲು ಪ್ರಯತ್ನಿಸುತ್ತಾರೆ” ಎಂದು ಕಮಲ್ ಹಾಸನ್ ಹೇಳಿದ್ದರು.

ಇದನ್ನೂ ಓದಿ: ನಿಮ್ಮ ವಿಚಾರ ಪಾಲಿಸಿದ್ದೀವಿ. ನಮ್ಮ ಮಾತು ನಿಮಗೆ ಕೇಳುತ್ತಿದೆಯೇ? – ಪ್ರಧಾನಿ ಮೋದಿಗೆ ಕಮಲ್‌ ಹಾಸನ್‌ ಬಹಿರಂಗ ಪತ್ರ

ಪೆರಿಯಾರ್‌ ಹಾಗೂ ಗಾಂಧಿ ಅನುಯಾಯಿಯಾಗಿ ನಾನು ಅವರನ್ನು ಚೆನ್ನಾಗಿ ಅರಿತಿದ್ದೇನೆ. ಅವರಷ್ಟು ಬುದ್ಧಿವಂತರು ಯಾರೂ ಇರಲಾರರು. ಅವರು ಈ ಸಮಾಜಕ್ಕೆ ನೀತಿ, ಸಮಾನತೆ ಮತ್ತು ಸಮೃದ್ಧಿಯನ್ನು ತೋರಿಸಿಕೊಟ್ಟವರು.

“ಕೆಳಸ್ತರವನ್ನು ನಾಶಗೊಳಿಸಲು ಹೊರಟರೆ, ಅದು ಮೇಲುಸ್ತರದ ವಿನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ಇತಿಹಾಸ ತಿಳಿಸಿಕೊಟ್ಟಿದೆ. ಇದನ್ನು ವಿಜ್ಞಾನ ಕೂಡಾ ಒಪ್ಪುತ್ತದೆ!” ಎಂದು ಮೋದಿಯವರ ನೋಟು ಅಮಾನ್ಯೀಕರಣ ಮತ್ತು ಲಾಕ್‌ಡೌನ್‌ ಘೋಷಣೆಯನ್ನು ಕಮಲ್ ವಿರೋಧಿಸಿದ್ದರು.

Please follow and like us:
error