ನಾಳೆ ಕಬಾಲಿ ಹವಾ…!

 ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರಕ್ಕಾಗಿ ಕಾಯ್ತಿದ್ದ ಸಿನಿಪ್ರಿಯರು ತುಂಬಾನೆ ಎಕ್ಸೈಟ್ ಆಗಿದ್ದಾರೆ. ರಿಲೀಸ್ ಗೂ ಮುಂಚೇನೆ ದಾಖಲೆ ನಿರ್ಮಿಸಿರೋ ಕಬಾಲಿ ನಾಳೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಕಬಾಲಿ ಚಿತ್ರದಿಂದ ರಜಿನಿ ಮೇನಿಯಾ ಜೋರಾಗಿದ್ದು, ನೆಚ್ಚಿನ ನಟನ ಸಿನಿಮಾವನ್ನು ಸ್ವಾಗತಿಸೋದಿಕ್ಕೆ ರಜಿನಿ ಫ್ಯಾನ್ಸ್ ರೆಡಿಯಾಗಿದ್ದಾರೆ.  ಭಾರತ ಸೇರಿ ವಿಶ್ವದಾದ್ಯಂತ ಕಬಾಲಿ ಸುಮಾರು 5000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕಬಾಲಿ ರಿಲೀಸಾಗ್ತಿದೆ. ಈಗಾಗ್ಲೇ ಚಿತ್ರದ ಎಲ್ಲಾ ಶೋನ ಟಿಕೆಟ್ ಗಳು ಸೋಲ್ಡ್ ಔಟಾಗಿವೆ. ದುಬಾರಿ ದರದಲ್ಲಿ ಟಿಕೆಟ್ ಮಾರಾಟವಾಗಿದೆ. ಈ ಬಗ್ಗೆ ಎಚ್ಚರ ವಹಿಸಿರುವ ಆದಾಯ ತೆರಿಗೆ ಅಧಿಕಾರಿಗಳು ನಾಳೆ ಮುಂಜಾನೆಯಿಂದಲೇ ಥಿಯೇಟರ್ ಗಳಿಗೆ ಭೇಟಿ ಕೊಟ್ಟು ಅನಧಿಕೃತ ಟಿಕೆಟ್ ಮಾರಾಟವಾಗುವುದರ ಮೇಲೆ ಕಣ್ಣಿಡಲಿದ್ದಾರೆ.  ಪಾ.ರಂಜಿತ್ ಕಬಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ರಾಧಿಕಾ ಅಪ್ಟೆ ರಜಿನಿಗೆ ಜೋಡಿಯಾಗಿದ್ದಾರೆ, ಕನ್ನಡದ ಕಿಶೋರ್ ಚಿತ್ರದಲ್ಲಿ ವಿಲನ್ ಆಗಿ ಮಿಂಚಲಿದ್ದಾರೆ. kkkk

Please follow and like us:
error