ದ್ವೇಷ ಭಾಷಣಕ್ಕೆ ಫೇಸ್ಬುಕ್ ಅನ್ನು ಧ್ವನಿವರ್ಧಕದಂತೆ ಬಳಸಲಾಗುತ್ತದೆ – ಅಲಾಫಿಯಾ ರೆಯಬ್

ಹೊಸದಿಲ್ಲಿ , ಅ .: ರಾಷ್ಟ್ರೀಯ ಪೌರತ್ವ ನೋಂದಣಿ ( ಎನ್‌ಆರ್‌ಸಿ ) ಆರಂಭಿಸಿದ ಬಳಿಕ ಅಸ್ಸಾಂನಲ್ಲಿ ಬಂಗಾಳಿ ಮುಸ್ಲಿಮರನ್ನು ಗುರಿಯಾಗಿರಿಸಿ ಹರಡುತ್ತಿರುವವರಿಗೆ ಮಾಡುತ್ತಿರುವವರಿಗೆ ಕಡಿವಾಣ ಹಾಕಲು ಫೇಸ್‌ಬುಕ್ ವಿಫಲವಾಗಿದೆ ಎಂದು ನೂತನ ವರದಿಯೊಂದು ಹೇಳಿದೆ . ‘ ಮೆಗಾಫೋನ್ ಫಾರ್ ಹೇಟ್ ‘ ಹೆಸರಿನ ವರದಿಯನ್ನು ಲಾಭ ರಹಿತ ಜಾಗತಿಕ ಹೋರಾಟಗಾರರ ಗುಂಪು ‘ ಆವಾಝ್ ‘ ಬಿಡುಗಡೆ ಮಾಡಿದೆ . 1 ಲಕ್ಷ ಬಾರಿ ಶೇರ್ ಆದ ಹಾಗೂ 54 ಲಕ್ಷ ಬಾರಿ ವೀಕ್ಷಣೆಯಾದ ಬಂಗಾಳಿ ಮುಸ್ಲಿಮರನ್ನು ‘ ಕ್ರಿಮಿನಲ್‌ ‘ , ‘ ಅತ್ಯಾಚಾರಿಗಳು ‘ , ‘ ಹಂದಿಗಳು ‘ , ‘ ಭಯೋತ್ಪಾದಕರು ‘ ಹಾಗೂ ‘ ನಾಯಿಗಳು ‘ ಎಂದು ಕರೆಯುವಂತಹ ಪೋಸ್ಟ್ಗಳನ್ನು ಫೇಸ್‌ಬುಕ್‌ನಲ್ಲಿ ‘ ಆವಾಝ್ ‘ ಪತ್ತೆ ಹಚ್ಚಿದೆ . ಅಸ್ಸಾಂ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ( ಎನ್‌ಆರ್‌ಸಿ ) ಕುರಿತಂತೆ 800ಕ್ಕೂ ಅಧಿಕ ಪೋಸ್ಟ್ಗಳು ಹಾಗೂ ಟೀಕೆಗಳನ್ನು 

ಪರಿಶೀಲಿಸಿದ್ದೇವೆ . ಇದರಲ್ಲಿ ಶೇ . 26 . 5 ಅಥವಾ 213 ಪೋಸ್ಟ್ಗಳು ಹಾಗೂ ಟೀಕೆಗಳು ಫೇಸ್‌ಬುಕ್‌ನ ಸಮುದಾಯ ಗುಣಮಟ್ಟ ನೀತಿಯನ್ನು ಉಲ್ಲಂಘಿಸಿದೆ ಎಂದು ‘ ಆವಾಝ್ ‘ ತಿಳಿಸಿದೆ . ಬೆದರಿಕೆ , ಹೆಣ್ಣುಮಕ್ಕಳಿಗೆ ವಿಷ ನೀಡುವ , ಭ್ರೂಣ ಹತ್ಯೆ ನಡೆಸುವ ಬೆದರಿಕೆ ಸೇರಿದಂತೆ 213 ಪೋಸ್ಟ್ಗಳಲ್ಲಿ ಫೇಸ್‌ಬುಕ್ ಕೇವಲ 96ನ್ನು ಮಾತ್ರ ಅಳಿಸಿದೆ ಎಂದು ಆವಾಝ್ ‘ ಆರೋಪಿಸಿದೆ . ‘ ಆವಾಝ್ ‘ ನ ಹಿರಿಯ ಪ್ರಚಾರಕ ಅಲಾಫಿಯಾ ರೆಯಬ್ , ಅಸ್ಸಾಂನ ಅಲ್ಪಸಂಖ್ಯಾತರ ವಿರುದ್ದದ ದ್ವೇಷ ಭಾಷಣಕ್ಕೆ ಫೇಸ್ಬುಕ್ ಅನ್ನು ಧ್ವನಿವರ್ಧಕದಂತೆ ಬಳಸಲಾಗುತ್ತದೆ ಎಂದಿದ್ದಾರೆ . ಇದಕ್ಕೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ ವಕ್ತಾರ , ‘ ಆವಾಝ್ ‘ ಸೂಚಿಸಿದ ಎಲ್ಲ ಅಂಶಗಳ ಬಗ್ಗೆ ಫೇಸ್‌ಬುಕ್ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ .

The print

Please follow and like us:
error