ದೇಶಾದ್ಯಂತ ಜೂನ್ 30 ರವರೆಗೆ ಲಾಕ್ ಡೌನ್ ವಿಸ್ತರಣೆ

ಜೂನ್ 8 ರಿಂದ ಧಾರ್ಮಿಕ ಸ್ಥಳಗಳು , ಮಾಲ್ , ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ

ಹೊಸದಿಲ್ಲಿ , ಮೇ .30 : ದೇಶಾದ್ಯಂತ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ . ಆದರೆ ಕಂಟೈನ್ ಮೆಂಟ್ ಝೂನ್ ಗಳಿಗೆ ಮಾತ್ರ ಲಾಕ್‌ಡೌನ್ ಅನ್ವಯಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ . ಜೂನ್ 8 ರಿಂದ ಧಾರ್ಮಿಕ ಸ್ಥಳಗಳು , ಮಾಲ್ , ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ . ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ .

Please follow and like us:
error