ದೆಹಲಿ ಪ್ರತಿಭಟನಾ ನಿರತ ರೈತರಿಗೆ ಟ್ರಕ್ ಗಟ್ಟಲೇ ಪೈನಾಪಲ್ ಕಳಿಸಿದ ಕೇರಳ ರೈತರು

ಹೊಸದಿಲ್ಲಿಡಿ : ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆಯು ಒಂದು ತಿಂಗಳು ದಾಟಿ ಮುಂದೆ ಸಾಗುತ್ತಿದೆ . ಈ ನಡುವೆ ಹಲವಾರು ಮಂದಿ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ ಹಾಗೂ ಆಹಾರ ಸಾಮಗ್ರಿ ಸೇರಿದಂತೆ ಹಲವಾರು ವಸ್ತುಗಳನ್ನು ನೀಡುವ ಮೂಲಕ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ . ಇದೀಗ ಪ್ರತಿಭಟನಾನಿರತ ರೈತರಿಗೆ ಕೇರಳದ ರೈತರು ಟ್ರಕ್ ತುಂಬಾ ಪೈನಾಪಲ್ ಗಳನ್ನು ಕಳುಹಿಸಿರುವ ಕುರಿತು indiatoday.in ವರದಿ ಮಾಡಿದೆ . .

‘ ವಾಝಕ್ಕುಳಮ್ ಪೈನಾಪಲ್ ‘ ಎಂದೆ ಪ್ರಸಿದ್ದಿಯಾಗಿರುವ ಈ ಹಣ್ಣನ್ನು ವಾಝಕ್ಕುಳಮ್ ಎಂಬ ಪ್ರದೇಶದಲ್ಲೇ ಬೆಳೆಸಲಾಗುತ್ತದೆ . ಸುಮಾರು 20 ಟನ್ ಗಿಂತಲೂ ಹೆಚ್ಚಿನ ಪೈನಾಪಲ್ ಅನ್ನು ಒಂದು ಟ್ರಕ್ ನಲ್ಲಿ ತುಂಬಿಸಿ ದಿಲ್ಲಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ . ಪೈನಾಪಲ್ ಬೆಳೆಯುವ ರೈತರ ಅಸೋಸಿಯೇಶನ್ ನಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ . ಗುರುವಾರದಂದು ಕೇರಳದಿಂದ ಪೈನಾಪಲ್ ತುಂಬಿಕೊಂಡು ಹೊರಟ ಟ್ರಕ್ ಗೆ ಕೇರಳದ ಕೃಷಿ ಮಂತ್ರಿ ವಿ . ಸುನೀಲ್ ಕುಮಾರ್ ಹಸಿರು ನಿಶಾನೆ ತೋರಿದರು . “ ಪಂಜಾಬ್ ನ ರೈತರು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ . ಅವರಿಗೆ ನಾವು ಈ ಮೂಲಕ ಬೆಂಬಲ ಸೂಚಿಸಿದ್ದೇವೆ ಎಂದು ಪೈನಾಪಲ್ ಅಸೋಸಿಯೇಶನ್ ನ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ . ಬೇಡಿಕೆ ಹೆಚ್ಚಿದ್ದ ಸಂದರ್ಭಗಳಲ್ಲಿ ವಾಝಕ್ಕುಳಮ್ ನಿಂದ ಸುಮಾರು 1400 ಟನ್ ಗೂ ಹೆಚ್ಚಿನ ಪೈನಾಪಲ್ ಗಳು ಭಾರತದಾದ್ಯಂತ ಪೂರೈಕೆಯಾಗುತ್ತವೆ ಎಂದು ವರದಿ ತಿಳಿಸಿದೆ .

Please follow and like us:
error