ದನದ ಮಾಂಸ ಮತ್ತು ಜನಾಂಗಿಯ ಕಲಹ- ಹಾರೋಹಳ್ಳಿ ರವೀಂದ್ರ

3

ದನದ ಸಾಗಾಣಿಕೆ ಈ ಕಾಲದಲ್ಲಿ ಹುಟ್ಟಿಕೊಂಡ ಬಹುದೊಡ್ಡ ಕೋಮುವಾದದ ಬಿಕ್ಕಟ್ಟೆ ಆಗಿದೆ. ಅದನ್ನು ಪವಿತ್ರ ಹಾಗೂ ಧರ್ಮ ಎನ್ನುವ ಮೂಲಕ ಭಾರತದಲ್ಲಿ ಜನಾಂಗಿಯ ವೈರುಧ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಅಂತಹ ಚಾರಿತ್ರಿಕ ಅಸ್ಪಷ್ಟಗಳು ಕಾಲಾನುಕಾಲದಲ್ಲಿ ಜರುಗುತ್ತಲೇ ಬಂದಿದ್ದರು. ಈ ಕಾಲದಲ್ಲಿ ಮತ್ತಷ್ಟು ತೀವ್ರತೆಯಿಂದ ಉಲ್ಬಣಿಸಿದೆ. ದಿನಾಂಕ 31-05-2016 ರಂದು ರಾಜಸ್ಥಾನದ ಛೋಟಿ ಸದ್ರಿ ಪ್ರತಾಪ್ ಘರ್ ಜಿಲ್ಲೆಯಲ್ಲಿ 50 ಧನದ ರಾಸನ್ನು ಮುಸಲ್ಮಾನರು ಸಾಗಿಸುತ್ತಿದ್ದಾರೆ ಎನ್ನಲಾಗಿ ಮುಸ್ಲಿಂ ಚಾಲಕ ಮತ್ತು ಆತನ ಮೂರು ಸಹಾಯಕರನ್ನು ಸಂಘಪರಿವಾರದ ಗುಂಪು ಲಾರಿಯನ್ನು ಅಡ್ಡಗಟ್ಟಿ ಪೊಲೀಸರ ಸಮ್ಮುಖದಲ್ಲಿಯೇ ಆ ನಾಲ್ವರನ್ನು ವಿವಸ್ತ್ರಗೊಳಿಸಲಾಗಿದೆ. ಪ್ರಾಣಿಗಳನ್ನು ಹಿಂಸೆ ಮಾಡಲಾಗಿದೆ ಎಂದು ಆ ನಾಲ್ವರ ಮೇಲು ದೂರು ದಾಖಲಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಆಯಾಮಗಳಲ್ಲಿ ಹರಿದಾಡುತ್ತಿದೆ.

ದನದ ಮಾಂಸ ಆಹಾರವನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಅದರಲ್ಲಿ ಪ್ರಮುಖವಾಗಿ ದಲಿತರು ಮತ್ತು ಮುಸಲ್ಮಾನರು ಇಂತಹ ದಾಳಿಗಳನ್ನು ಕಾಲಾನುಕ್ರಮೇಣ ಎದುರಿಸುತ್ತಲೇ ಬಂದಿದ್ದಾರೆ. ದನಗಳನ್ನು ಕೊಂಡು ಅದನ್ನು ಕುಯ್ದು ಒಬ್ಬ ವ್ಯಾಪಾರಸ್ಥ ಮುಸಲ್ಮಾನನಿಗೆ ಇವರನ್ನು ಎದುರಿಸುವುದೇ ಪ್ರಯಾಸವಾಗಿದೆ. ಇಂತಹ ವಿಕೃತ ಸಂಸ್ಕೃತಿಗಳು ಯಾಕೆ ಹುಟ್ಟಿಕೊಳ್ಳುತ್ತವೆ? ಇದರ ಹಿಂದೆ ಏನೆಲ್ಲಾ ಹುನ್ನಾರಗಳಿರುತ್ತವೆ? ಮತ್ತು ದನದವನ್ನು ಪಾವಿತ್ರ್ಯಗೊಳಿಸಿ ವಿನಾಕಾರಣ ಧರ್ಮ ಮಾಡಿಕೊಂಡಿದ್ದೇಕೆ? ಎಂಬೆಲ್ಲಾ ಒಳ-ಹೊರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಚೌಕಟ್ಟಿನಲ್ಲಿ ನೊಡಬೇಕಿದೆ. ಅದರ ಜತೆಗೆ ಐತಿಹಾಸಿಕ ಸತ್ಯ ಮತ್ತು ರಾಜಕೀಯ ಕುತಂತ್ರಗಳನ್ನು ಅರಿಯಬೇಕಿದೆ.cow-muslim-india

ದೇವರು ಮತ್ತು ಧರ್ಮದ ಹೆಸರಿನಲ್ಲಿ ಈ ದೇಶದಲ್ಲಿ ಯಾವ ಅರಾಜಕತೆಯನ್ನಾದರು ಹುಟ್ಟು ಹಾಕಬಹುದು ಎನ್ನುವುದಕ್ಕೆ ದನದ ಬಾಡಿನ ವಿರೋಧಿ ಸಂಸ್ಕೃತಿಯೇ ಸಾಕ್ಷಿ. ಹಿಂದೂ ಧರ್ಮದಲ್ಲಿ ಪ್ರಾಣಿಗಳನ್ನು ದೇವರೆನ್ನುವ ಮೂಲಕ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. ವಿಷ್ಣುವಿನ ಒಂಬತ್ತು ಅವತಾರಗಳಲ್ಲಿ ರಾಮ,ಕರಷ್ಣ, ಪರಶುರಾಮ ಮತ್ತು ವಾಮನ, ಇನ್ನುಳಿದ ಅವತಾರಗಳೆಂದರೆ ನರಸಿಂಹ(ಸಿಂಹ), ಮತ್ಸ್ಯ(ಮೀನು), ವರಾಹ(ಹಂದಿ) ಮತ್ತು ಕೂರ್ಮ(ಆಮೆ). ಈ ಪೈಕಿ ರಾಮ,ಕೃಷ್ಣ ಮತ್ತು ನರಸಿಂಹನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಮಾನವರೇ ಆದ ಮೋಹಿನಿ ಮತ್ತು ವಾಮನರಿಗೆ ಪೂಜೆಯೆ ಇಲ್ಲ. ಹಂದಿ, ಮೀನು, ಆಮೆ ಇವುಗಳು ಹಿಂದೂಗಳೆನಿಸಿಕೊಂಡರು ಕೊಂದು ತಿನ್ನುವುದು ಸವರ್ೇಸಾಮಾನ್ಯವಾಗಿದೆ. ದಕ್ಷಿಣ ಭಾರತದ ಪಶ್ಚಿಮ ತೀರಗಳಲ್ಲಿ ಬಂಗಾಳಿ ಬ್ರಾಹ್ಮಣರು ಮೀನು ತಿನ್ನುವುದರಲ್ಲಿ ನಿಸ್ಸೀಮರು, ಆ ಮೀನನ್ನು ನಿರು ಬಾಳೆ ಎಂದು ಕರೆಯುತ್ತಾರೆ. ಆದರೆ ಇಲ್ಲಿ ತುಂಬಾ ಗೊಂದಲವಾಗಿರುವ ಪ್ರಾಣಿ ಎಂದರೆ ಗೋವಾಗಿದೆ. ವಿಷ್ಣುವಿನ ಅವತಾರದ ಪಟ್ಟಿಯಲ್ಲೆ ಇಲ್ಲದ ಗೋವು ಪೂಜಾರ್ಹವಾಗಿದ್ದು ಯಾವಾಗ? ಅದು ಪವಿತ್ರ್ಯ ಮತ್ತು ಮಾತೆ ಎನಿಸಿಕೊಂಡಿದ್ದು ಯಾವಾಗ? ಎಂಬುದೇ ಇಲ್ಲಿ ದೊಡ್ಡ ಪ್ರಶ್ನೆ ಯಾಗಿದೆ. ಇಂತಹ ಗೊಂದಲಗಲ ಪ್ರಶ್ನೆಯಿಂದ ಆದಷ್ಟು ಯುವ ಪಿಳಿಗೆ ತಿಳಿದು ಹೊರಬರಬೇಕಿದೆ. ಇಲ್ಲವಾದರೆ ಇಡೀ ಮತೀಯವಾದ ನಿಮ್ಮ ಮೆದುಳನ್ನು ತಿಂದು ಬಿಡುತ್ತದೆ.

ಪ್ರಾಚೀನ ಕಾಲದಲ್ಲಿ ದನದ ಮಾಂಸ ತಿನ್ನುವುದಕ್ಕೆ ಮತ್ತು ಬಲಿಕೊಡುವುದಕ್ಕೆ ಎರಡಕ್ಕೂ ಬಳಕೆಯಾಗುತ್ತಿತ್ತು. ಅದಲ್ಲದೆ ರಾಮಾಯಣದಲ್ಲಿಯೂ ಬಳಕೆಯಾಗಿರುವುದನ್ನು ಇತ್ತಿಚಿಗಂತು ಕೇಳಿದ್ದೇವೆ. ವನವಾಸದ ಮೊದಲ ದಿನಗಳಲ್ಲಿ ಗುಹ ಎಂಬುವವನ ಅತಿಥ್ಯ ಸ್ವೀಕರಿಸಿದ ನಂತರ ಭಾರಧ್ವಾಜರ ಋಷ್ಯಾಶ್ರಮಕ್ಕೆ ರಾಮ ಬರುತ್ತಾನೆ. ರಾಮನನ್ನು ಸ್ವಾಗತಿಸುತ್ತಾ ಋಷಿ ಭಾರಧ್ವಾಜ, ಶುದ್ದೀಕರಣಕ್ಕಾಗಿ ನೀರನ್ನೂ ಮಧುಪರ್ಕಕ್ಕಾಗಿ ಒಂದು ಹಸುವನ್ನು ತನ್ನಿ ಎಂದು ಶಿಷ್ಯರಿಗೆ ಆದೇಶಿಸುತ್ತಾನೆ. ಮಧುಪರ್ಕ ಎಂದರೆ ನಿಮಗೆ ಗೊತ್ತೆ? ಇತ್ತೀಚಿನ ದಿನಗಳಲ್ಲಿ ಮಧುಪರ್ಕ ಎಂದರೆ ಜೇನನ್ನು ಬೆರೆಸಿದ ಮೊಸರು ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಆದರೆ ಮಧುಪರ್ಕ ಎಂದರೆ ಗೋಮಾಂಸದಿಂದ ಮಾಡಿದ ಖಾದ್ಯ ಎಂದು. ಆದರೆ ಇದನ್ನು ಮುಚ್ಚಿಟ್ಟು ಹೊಸ ವ್ಯಾಖ್ಯಾನಗಳನ್ನು ಸೃಷ್ಟಿಸಲಾಗುತ್ತಿದೆ. ದನದ ಮಾಂಸವು ಶ್ರೇಷ್ಟವಾಗಿದ್ದು, ಶುದ್ದೀಕರಣ ಮತ್ತು ಶ್ರೇಷ್ಠತೆಯ ಸಂಕೇತವಾಗಿತ್ತು, ಅದನ್ನು ತಿಂದು ತೇಗಿ, ಕೊನೆಗೆ ದೇವರ ಪಟ್ಟಿಯಲ್ಲಿ ಇಟ್ಟು ರಾಜಕೀಯ ಮಾಡುತ್ತಿರುವುದು ಏಕೆ ಎಂಬುದನ್ನು ಅರಿತುಕೊಳ್ಳಬೇಕಿದೆ.

ಗೋವನ್ನು ಯಾಕೆ ಪವಿತ್ರಗೊಳಿಸಿದರು? ಅದನ್ನು ಧರ್ಮ ಮತ್ತು ದೇವರ ಹೆಸರಿನಲ್ಲಿ ಯಾಕೆ ಕೋಮುವಾದವನ್ನು ಹುಟ್ಟು ಹಾಕಲಾಗುತ್ತಿದೆ ಎಂಬುದಕ್ಕೆ ಬಲವಾದ ಒಂದು ಪ್ರಾಚೀನ ಮತ್ತೊಂದು ಆಧುನಿಕ ಎರಡು ಕಾರಣಗಳಿವೆ. ಗೋವನ್ನು ಹಿಂದೂ ಧರ್ಮದ ಭಾಗವಾಗಿ ಮಾಡಿಕೊಂಡಿರುವ ಕಾರಣ ಬುದ್ಧ ಧರ್ಮವನ್ನು ನಾಶ ಪಡಿಸಲು ಒಂದು ಅಸ್ತ್ರವಾಗಿ ಬಳಸಿಕೊಂಡರು, ಆದರೆ ಇಂದು ಆಧುನಿಕ ಯುಗದಲ್ಲಿ ಮುಸಲ್ಮಾನರ ಮೇಲೆ ಕೋಮುಗಲಭೆ ಸೃಷ್ಟಿಸಲು ರಾಜಕೀಯ ಉಪಯುಕ್ತ ವಸ್ತುವನ್ನಾಗಿ ಮಾಡಿಕೊಳ್ಳಲಾಗಿದೆ. ಬುದ್ಧರ ಕಾಲದಲ್ಲಿ ಅಂಗುತ್ತರ ನಿಕಾಯದಲ್ಲಿ ಉಗತ್ತ ಶರೀರ ಎಂಬ ಬ್ರಾಹ್ಮಣನ ಪ್ರಕರಣವೊಂದು ಬರುತ್ತದೆ. ಆತ ಬಲಿ ನಿಡುವ ಯಜ್ಞವೊಂದನ್ನು ಆಯೋಜಿಸುತ್ತಾನೆ. ಉಜ್ಜಯ ಮತ್ತು ಉದಾಯಿ ಎಂಬ ಇಬ್ಬರು ಬ್ರಾಹ್ಮಣರು ಪ್ರಾಣಿ ಬಲಿ ಮತ್ತು ಯಜ್ಞಗಳಿಗೆ ಸಂಬಂಧಿಸಿದಂತೆ ಬುದ್ಧರನ್ನು ಪ್ರಶ್ನಿಸುತ್ತಾರೆ. ಆದರೆ ಬುದ್ಧರು ಹತ್ಯೆಯನ್ನಳೊಗೊಂಡ ಯಾವುದೇ ಯಜ್ಞವನ್ನು ನಾನು ಸಮಥರ್ಿಸುವುದಿಲ್ಲ ಎನ್ನುತ್ತಾರೆ. ಅನಂತರ ಬುದ್ಧರು ಶ್ರಾವಸ್ತಿ ನಗರಕ್ಕೆ ಭೇಟಿ ನಿಡಿದಾಗ ಕೋಸಲದ ದೊರೆ ಪ್ರಸೇನಜಿತ್ 500 ಹಸುಗಳು, 500 ಗಂಡು ಕರುಗಳು, 500 ಹೆಣ್ಣು ಕರುಗಳು ಮತ್ತು 500 ಕುರಿಗಳನ್ನು ಯಜ್ಞಕ್ಕೆ ಆಯೋಜಿಸಿರುತ್ತಾನೆ. ಆದರೆ ಬುದ್ಧರ ಉಪದೇಶದಿಂದ ಯಜ್ಞವನ್ನು ಆತ ಕೈ ಬಿಡುತ್ತಾನೆ. ಆಗಾದರೆ ಬುದ್ಧರು ಆತನಿಗೆ ಏನು ಉಪದೇಶ ನಿಡುತ್ತಾರೆ? ಜಾನುವಾರುಗಳನ್ನು ಬಲಿ ನಿಡಬಾರದು. ಬಲಿ ನಿಡುವುದರಿಂದ ಪ್ರಕೃತಿಗೆ ಹಾನಿಯಾಗುತ್ತದೆ. ಅನಾರೋಗ್ಯಕರ ವಾತಾವರಣ ಸೃಷ್ಟಿಗೊಳ್ಳುತ್ತದೆ. ಆಹಾರವು ಅದಗೆಡುತ್ತದೆ. ನಮ್ಮ ಪೋಷಕರು ಮತ್ತು ರಕ್ತ ಸಂಬಂಧಿಗಳಂತೆಯೆ ಜಾನುವಾರುಗಳು ನಮಗೆ ಆಹಾರ ಒದಗಿಸುತ್ತವೆ. ಶಕ್ತಿ, ಸೌಂದರ್ಯ ಹರುಷವನ್ನು ನಿಡುತ್ತವೆ ಎಂದು ಯಜ್ಞ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪದೇಶದಿಂದ ಬಲಿಯಜ್ಞವೆ ರದ್ದಾಗುತ್ತದೆ. ಆನಂತರ ಬುದ್ಧರ ಅನುಯಾಯಿಗಳು ಹೆಚ್ಚಾದ್ದರಿಂದ ಬ್ರಾಹ್ಮಣರು ದನದ ಮಾಂಸದಿಂದ ದೂರ ಉಳಿದುಕೊಂಡರು. ಅದರಲ್ಲೂ ಯಾವ ಕಾರಣಕ್ಕೆ ಉಳಿದುಕೊಂಡರು? ದನಗಳನ್ನು ಬಲಿಕೊಡುವುದು ತಪ್ಪೆಂದು ಜನರಿಗೆ ತಿಳಿದ ಮೇಲೆ ವೈದಿಕ ಸಂಸ್ಕೃತಿಯನ್ನು ಜನರು ನಿರಾಕರಿಸುತ್ತ ಬಂದ ಕಾರಣ. ಆತಂಕಗೊಂಡ ವೈದಿಕರು ತಮ್ಮ ಉಳಿವಿಗಾಗಿ ಗೋವಿನಿಂದ ದೂರ ಉಳಿದು, ಅದನ್ನು ಹಿಂದೂ ಧರ್ಮದ ಒಂದು ಭಾಗ, ಅದು ಪಾವಿತ್ರ್ಯವಾದದ್ದು ಎಂದು ಸಾರಿಕೊಂಡು ಬರಲು ಶುರುವಿಚ್ಚುಕೊಂಡರು. ಆದರೆ ಕೆಲವರು ಇಲ್ಲಿ ಧಿಕ್ಕು ತಪ್ಪಿಸುತ್ತಾರೆ. ಬುದ್ಧರು ಪ್ರಾಣಿ ಮಾಂಸವನ್ನು ತಿನ್ನಬಾರದೆಂದು ಹೇಳಿದ್ದಾರೆ, ಹಾಗಾಗಿ ನೀವು ಬುದ್ಧರ ವಿರೊಧಿ ಎಂದು ಹೇಳುತ್ತಾರೆ. ಬುದ್ಧರು ಬಲಿ ಕೊಡುವುದನ್ನು ವಿರೊಧಿಸಿದ್ದಾರೆಯೆ ವಿನಃ, ತಿನ್ನ ಬೇಡಿ ಎಂದು ಹೇಳಿಲ್ಲ. ಜಾನುವಾರುಗಳು ಆಹಾರವೆ ಎಂದು ಹೇಳಿದ್ದಾರೆ. ಆದರೆ ಕೆಲವು ಮತೀಯವಾದಿಗಳು ಬುದ್ದರ ಹೇಳಿಕೆಗಳನ್ನೆ ತಿರುಚುತ್ತಿದ್ದಾರೆ. ಬುದ್ದರು ಸಸ್ಯಹಾರವೇ ಆಗಿದ್ದರೆ, ಕುಂದ ಎಂಬ ಅಕ್ಕಸಾಲಿಗ ಮಾಡಿದ ಹಂದಿ ಮಾಂಸವನ್ನು ಬುದ್ದರು ಏಕೆ ಸೇವಿಸುತ್ತಿದ್ದರು? ಬುದ್ದರು ಆಹಾರವನ್ನು ಆಹಾರವಾಗಿ ನೊಡಿದ್ದಾರೆ. ಅವರು ಹೇಳುವುದಿಷ್ಟೆ ಯಾವುದೇ ಆಹಾರದ ಮೂಲವನ್ನು ತಿಳಿಯದೇ ತಿನ್ನಬೇಡಿ ಎಂದು. ಹಾಗಾಗಿ ಒಳ್ಳೆಯ ಆಹಾರವನ್ನು ಉಪಯೋಗಿಸುವುದರಲ್ಲಿ ತಪ್ಪಿಲ್ಲ.

ಬುದ್ದರ ಆರ್ಭಟಕ್ಕೆ ನಲುಗಿ ಗೋವನ್ನು ಪವಿತ್ರ ಮಾಡಿಕೊಂಡ ಬ್ರಾಹ್ಮಣ್ಯ ಇಂದಿಗೂ ಕೂಡ ಅದರ ಪರವಾಗಿಯೇ ಮಾತನಾಡಿಕೊಂಡು ರಾಜಕೀಯ ಇಚ್ಚಾಶಕ್ತಿಯ ಬೇಳೆ ಬೇಯಿಸಿಕೊಳ್ಳಲು ಸದಾ ಸನ್ನದ್ದವಾಗಿದೆ. ಬುದ್ದ ಧರ್ಮವನ್ನು ಅವನಿತಿಗೆಂದು ಗೋವನ್ನು ಪವಿತ್ರ ಮಾಡಿಕೊಂಡ ಹಿಂದೂಗಳು, ಇಂದು ಮುಸಲ್ಮಾನರ ಮೇಲೆ ಕೋಮುವಾದದ ದಾಳಿ ಮಾಡಲು ಬಲಸಿಕೊಳ್ಳಲಾಗುತ್ತಿದೆ. ಇವರು ಒಂದೊಂದು ಕಾಲಗಟ್ಟದಲ್ಲಿ ಒಂದೊಂದು ಪ್ರಬೇಧವಾಗಿ ದಾಳಿಯನ್ನು ಸೃಷ್ಟಿಸಲಾಗುತ್ತಿದೆ. ಇಂದಿಗು ಕೂಡ ಮುಸಲ್ಮಾನರನ್ನು ಹಿಂದೂಗಳು ಯಾಕೆ ದ್ವೇಷಿಸುತ್ತಾರೆ? ದನದ ಮಾಂಸದ ಆಧಾರದ ಮೇಲೆ ಯಾಕೆ ದಾಳಿ ನಡೆಸಲಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.

ಮುಸ್ಲಿಂ ಆಳ್ವಿಕೆಯ ಪೂರ್ವದಲ್ಲಿ, ಮಾಂಸಹಾರಿಗಳು ಕ್ಷತ್ರಿಯ ಇಲ್ಲವೇ ಶೂದ್ರರೆ ಆಗಿದ್ದರು. ಅವರೆಲ್ಲರೂ ಬಹುತೇಕವಾಗಿ ಬ್ರಾಹ್ಮಣ ಮಂತ್ರಿಗಳ ಹತೋಟಿಯಲ್ಲಿರುತ್ತಿದ್ದರು. ಹಾಗಾಗಿ ಬ್ರಾಹ್ಮಣರು ಅವರನ್ನು ಮಾಂಸಹಾರವನ್ನು ತ್ಯಜಿಸುವಂತೆ ತಾಕೀತು ಮಾಡುತ್ತಿದ್ದರು. ಆದರೆ ಗೋಮಾಂಸ ಸೇವಿಸುವ ಮುಸ್ಲೀಮರು ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಬ್ರಾಹ್ಮಣರಿಗೆ ಮಂತ್ರಿಗಿರಿ, ಸಕರ್ಾರದ ಉನ್ನತ ಪದವಿಗಳು ಕೈತಪ್ಪಿ ಹೋದವು. ಮುಸ್ಲೀಂ ದೊರೆಗಳು ಬಹುತೇಕವಾಗಿ ರಜಪೂತ್, ಮರಾಠಿ, ಜೈನ, ದಲಿತರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಪಟೇಲ, ಶ್ಯಾನುಭೋಗ, ದೇಸಾಯಿ, ಕುಲಕಣರ್ಿ ಹೀಗೆ ಮುಂತಾದವರು ಗ್ರಾಮದ ಮಟ್ಟಗಳಲ್ಲಿ ಕೆಳಹಂತದ ಕೆಲಸಗಾರರಾಗಿ ಕಾರ್ಯನಿರ್ವಹಿಸಬೇಕಿತ್ತು. ಮೊಘಲ್ ಚಕ್ರವತರ್ಿ ಅಕ್ಬರ್ ಆಸ್ಥಾನದಲ್ಲಿಯೂ ಸಹ ಬ್ರಾಹ್ಮಣೇತರರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಬ್ರಾಹ್ಮಣನಾಗಿದ್ದ ಬೀರಬಲ್ ಆಸ್ಥಾನದ ವಿದೂಷಕನಾಗಿದ್ದನೇ ಹೊರತು, ಆಡಳಿತದಲ್ಲಿ ಅವನ ಪಾತ್ರ ಏನು ಇರಲಿಲ್ಲ. ಆದರೆ ಅಲ್ಲಲ್ಲೆ ಬನಿಯಾಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಕುಪಿತಗೊಂಡ ಹಿಂದೂಗಳು ಮುಸಲ್ಮಾನರ ಮೇಲೆ ಮತ್ತು ಶೂದ್ರ ದೊರೆಗಲ ಮೇಲೆ ಕತ್ತಿ ಮಸೆಯಲಾರಂಭಿಸಿದರು. ಒಂದು ಕಡೆ ಮುಸಲ್ಮಾನರ ಆಳ್ವಿಕೆ ಮತ್ತೊಂದು ಕಡೆ ಶೂದ್ರರ ಆಳ್ವಿಕೆ ಕೊನೆಗಾಣಲು ಹಲವಾರು ಕುತಂತ್ರಗಳನ್ನು ಮಾಡಿದ್ದಾರೆ. ಅದಲ್ಲದೆ ಕಟ್ಟಕಡೆಯ ಹಿಂದೂ ಸಾಮ್ರಾಜ್ಯ ಎಂದು ಬಹುಪರಾಕ್ ಮಾಡುವ ವಿಜಯ ನಗರ ಸಾಮ್ರಾಜ್ಯ ಪತನವಾಗಲು ಸಹ ಬ್ರಾಹ್ಮಣರೇ ಕಾರಣ. ಆದರೆ ಇಂದು ಅದು ನಮ್ಮ ಹಿಂದೂ ಸಾಮ್ರಾಜ್ಯ ಎಂದು ಹೇಳುತ್ತಾರೆ.

ಗೋವನ್ನು ಪವಿತ್ರ ಎಂದು ಅದನ್ನು ತಡೆಯಲು ವಿಫಲರಾದ ಕಾರಣ ಮುಸಲ್ಮಾನರನ್ನು ಕ್ಷತ್ರಿಯ, ವೈಶ್ಯ ಮತ್ತು ಶೂದ್ರರಲ್ಲಿ ಮುಸ್ಲೀಂ ಸ್ವೇಷವನ್ನು ಭಿತ್ತಿ ಬೇಳೆಸುವ ಕೆಲಸ ಮಾಡತೊಡಗಿದರು. ಮುಸಲ್ಮಾನರನ್ನು ಮ್ಲೇಚ್ಚರು(ವರ್ಣ ವ್ಯವಸ್ಥೆಗೆ ಹೊರತಾದ) ನಿಕೃಷ್ಟರು ಎಂದು ಕರೆದರು. ಆ ಮೂಲಕ ಶೂದ್ರರು ಮತ್ತು ಮುಸಲ್ಮಾನರಲ್ಲಿ ಒಂದು ದೊಡ್ಡ ಕಂದಕ ನಿಮರ್ಾಣ ಮಾಡಿದ್ದರು, ಹೀಗಲೂ ಮಾಡುತ್ತಿದ್ದಾರೆ. ಗೋ ಹಂತಕರು ಎಂದು ಮುಸಲ್ಮಾನರನ್ನು ಕರೆಯುವ ಮೂಲಕ, ಹಿಂದೂ ಪುರೋಹಿತಾಶಾಯಿಗಳು ಗೋವನ್ನು ಮುಸ್ಲೀಂ ದ್ವೇಷದ ಸಂಕೇತವನ್ನಾಗಿ ಮಾಡಿಕೊಂಡು ಕೋಮುಗಲಭೆಗಳನ್ನು ಸಂಘಟಿಸಲಾಯಿತು. ಅದು ಇಂದಿಗೂ ಕೂಡ ಮುಂದುವೆರದುಕೊಂಡೆ ಬರುತ್ತಿದೆ. ಬ್ರಿಟಿಷ್ ಸಕರ್ಾರದಲ್ಲಿ ಮುಸಲ್ಮಾನರು ಮಾಡಿದ ಖಿಲಾಫತ್ ಚಳವಳಿಗೆ ಗಾಂಧಿಯು ಬೆಂಬಲಸಿದ್ದರು. ಮುಸಲ್ಮಾನರನ್ನು ಬೆಂಬಲಿಸಲು ಕಾರಣವೇನೆಂದು ಇಟ್ಟ ಪ್ರಶ್ನೆಗೆ ಮುಸಲ್ಮಾನರ ಮಚ್ಚಿನಿಂದ ಗೋವನ್ನು ರಕ್ಷಿಸಬೇಕಿದೆ. ಆ ಕಾರಣಕ್ಕೆ ಖಿಲಾಫತ್ ಚಳವಳಿಗೆ ಬೆಂಬಲ ಸೂಚಿಸಿದೆ ಎಂದು ಗಾಂಧಿ ಹೇಳಿಕೊಂಡಿದ್ದಾರೆ. ಇದರಿಂದ ತಿಳಿಯುತ್ತದೆ ಗಾಂಧಿ ಒಬ್ಬ ಸಂಪ್ರದಾಯವಾದಿ ಎಂದು ಹಾಗೂ ಹಿಂದೂ ಆಚರಣೆಗಳ ಉಳಿವಿಗಾಗಿ ಕೆಲಸ ಮಾಡಿರುವವರಲ್ಲಿ ಅವರು ಒಬ್ಬರು ಎಂದು.

ಮುಸ್ಲೀಮರು ಮತ್ತು ಕ್ರೈಸ್ತರು ಇವರನ್ನು ಹೊರತು ಪಡಿಸಿ, ಹಿಂದೂ ಎಂದು ಕರೆದುಕೊಳ್ಳುವ ಪೈಕಿ ಭಾರತದಲ್ಲಿ ಶೇ.70 ರಷ್ಟು ಬಹುತೇಕವಾಗಿ ಗೋ ಪ್ರಿಯರು. ಬಹುತೇಕವಾಗಿ ಶೂದ್ರರು, ದಲಿತರು, ಬುಡಕಟ್ಟು ಜನಾಂಗಗಳು ಗೋಮಾಂಸ ಸೇವಿಸುತ್ತಾರೆ. ಆದರೆ ಹಿಂದೂ ಬ್ರಾಹ್ಮಣಶಾಯಿ ವರ್ಗ ನಾವು ಗೋವನ್ನಷ್ಟೆ ಅಲ್ಲ, ಯಾವುದೇ ಮಾಂಸವನ್ನು ತಿನ್ನುವುದಿಲ್ಲ ಎಂದು ಕರೆದುಕೊಳ್ಳುತ್ತಾರೆ. ಹಸುಗಳ ಹೈನುಗಾರಿಕೆ ಉದ್ಯಮದಲ್ಲಿ ತೊಡಗದ ಹಿಂದೂ ಮತೀಯವಾದಿಗಳು ಹೈನುಗಾರಿಕೆ ನಡೆಸುವ ರೈತರು, ಗೊಲ್ಲರು, ಕುರುಬರು, ಮುಸಲ್ಮಾನರು ಮತ್ತು ದಲಿತರು. ದನಕರುಗಳ ಸಗಣಿ ಎಂದೊಡನೆ ಮೂಗು ಮುಚ್ಚಿಕೊಂಡು ದೂರ ಸರಿಯುವ ಬ್ರಾಹ್ಮಣರು ಗೋ ಮಾತೆಯನ್ನು ಪೂಜಿಸುವ ಬಗ್ಗೆ ಇತರರಿಗೆ ಪ್ರವಚನ ನಿಡುತ್ತಾರೆ. ನಿಜಕ್ಕು ಇದು ಹಾಸ್ಯಸ್ಪದ.

ಭಾರತದಲ್ಲಿ ಮುಸಲ್ಮಾನರಷ್ಟೆ ದನದ ಮಾಂಸದ ಕಟುಕರು ಎಂದು ಕರೆಯಲಾಗುತ್ತಿದೆ. ಮುಸಲ್ಮಾನರನ್ನು ಹೊರತು ಪಡಿಸಿ ಭಾರತದಲ್ಲಿ ಓಬಿಸಿ, ಸಿಖ್ ಮುಂತಾದವರು ದಸನ ಮಾಂಸವನ್ನು ಕತ್ತರಿಸುವುದು ಮಾರುವ ಕೆಲಸವನ್ನು ಮಾಡುತ್ತಾರೆ. ಪಾಕಿಸ್ತಾನ ಉದಯವಾದ ಮೇಲೆ ಪಂಜಾಬ್ ನಲ್ಲಿ ದನದ ಮಾಂಸವನ್ನು ಕತ್ತರಿಸುವವರೆ ಸಿಖ್ಖರಾಗಿದ್ದಾರೆ. ಬಹತೇಕ ದೆಹಲಿಯಲ್ಲಿ ಸಿಖ್ಖರೇ ಮಾಂಸದಂಗಡಿ ಇಟ್ಟುಕೊಂಡಿದ್ದಾರೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಮುಸಲ್ಮಾನರು ತುಂಬಾ ಕಡಿಮೆ. ಅಲ್ಲಿ ಬಹುತೇಕವಾಗಿ ಹಿಂದುಳಿದ ವರ್ಗಗಳೇ ಮಾಂಸದ ವಹಿವಾಟು ಮಾಡುತ್ತವೆ. ಆದರೆ ದನ ಕಡಿಯುವವರು ಮುಸಲ್ಮಾನರು ಮಾತ್ರ ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಬಲಯುತವಾಗಿ ಮಾಡಿಕೊಳ್ಳಲಾಗುತ್ತಿದೆ. ನೇಪಾಳವನ್ನು ಹಿಂದೂ ರಾಜ್ಯ ಹಾಗೆ ಈಗೆ ಎಂದು ಕರೆಯುತ್ತಾರೆ. ಆದರೆ ಮೇವಿನ ಅಭಾವ ಉಂಟಾದಾಗ ಹಬ್ಬ ಮತ್ತು ಬಲಿಯ ನೆಪದಲ್ಲಿ ಸಾವಿರಾರು ದನದ ರಾಸುವನ್ನು ಬಲಿಕೊಡಲಾಗುತ್ತದೆ. ಇಂತಹ ಎಷ್ಟೋ ವಿಚಾರಗಳನ್ನು ಸಾರ್ವಜನಿಕರಿಗೆ ತಲುಪುವುದೇ ಇಲ್ಲ. ಆದರೆ ಮುಸಲ್ಮಾನರನ್ನು ತೋರಿಸಿ, ಅವರ ಮೇಲೆ ಗೋ ವಿರೊಧಿ ಪಟ್ಟಕಟ್ಟಿ ದೌರ್ಜನ್ಯ ಮಾಡಿ, ಮಿಸೆ ತಿರುವಿಸುವ ಹಿಂದೂ ಸಂಘಟನೆಗಳನ್ನು ನೊಡಿದರೆ ನನಗೆ ಪಾಪ ಎನಿಸುತ್ತದೆ. ಯಾಕೆಂದರೆ ಇವರು ಲಕ್ಷಾಂತರ ಯುವಕರನ್ನು ಬೌದ್ಧಿಕ ಮಾರ್ಗವನ್ನೆ ತೋರದೆ ವಂಚಿಸಿದ್ದಾರೆ. ಅಂತಹ ಅಮಾಯಕ ಯುವಕರನ್ನು ನೋಡಿದಾಗ. ಧರ್ಮದ ಗಾಂಜ ಏನೆಲ್ಲಾ ಮಾಡಿಸುತ್ತದೆ. ಇವರೆಲ್ಲಾ ಪ್ರಜ್ಞಾವಂತರಾಗುವುದು ಯಾವಾಗ ಎಂದು ಪ್ರಶ್ನೆಯಾಗುತ್ತದೆ.—– ಹಾರೋಹಳ್ಳಿ ರವೀಂದ್ರ

3

Please follow and like us:
error