ಡಿ.15ರವರೆಗೆ ಎಲ್ಲೆಲ್ಲಿ ನಿಮ್ಮ ಹಳೆಯ ನೋಟುಗಳನ್ನು ಬಳಸಬಹುದು?

new-500-1000_currency

ಅಮಾನ್ಯಗೊಂಡ 1,000 ರೂ. ಮತ್ತು ಐನೂರು ರೂಪಾಯಿ ನೋಟುಗಳನ್ನು ನ.24ರ ಮಧ್ಯರಾತ್ರಿಯ ಬಳಿಕ ಬದಲಾಯಿಸಿ ಕೊಡುವಂತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟವಾಗಿ ತಿಳಿಸಿದೆ. ಆದರೆ ನೀರು, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ಸಂದರ್ಭಗಳಲ್ಲಿ ಅಮಾನ್ಯಗೊಂಡಿರುವ 500 ರೂ. ನೋಟನ್ನು ಬಳಸಬಹುದು ಎಂದು ತಿಳಿಸಿದೆ.

500, 1000 ಮುಖಬೆಲೆಯ ನೋಟುಗಳನ್ನು ಹೊಂದಿರುವ ಜನರು ಇನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡುವುದೊಂದೇ ದಾರಿ.

ಅದಕ್ಕೂ ಡಿ.30ರವರೆಗೆ ಮಾತ್ರ ಅವಕಾಶವಿದೆ. ಆದರೆ 500 ರೂ. ಮುಖಬೆಲೆಯ ನೋಟುಗಳನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಬಳಸಲು ಡಿ.15ರವರೆಗೆ ರಿಯಾಯಿತಿ ನೀಡಲಾಗಿದೆ.

ನೀರು ಮತ್ತು ವಿದ್ಯುತ್ ಬಿಲ್‌ನ ಹೊಸ ಮತ್ತು ಬಾಕಿ ಬಿಲ್ ಪಾವತಿಗೆ ಅಮಾನ್ಯಗೊಂಡಿರುವ 500 ರೂ. ನೋಟು ಬಳಸಬಹುದು. ಆದರೆ ಈ ಅವಕಾಶ ವೈಯಕ್ತಿಕ ಅಥವಾ ಮನೆಬಳಕೆಯ ಸಂದರ್ಭದಲ್ಲಿ ಮಾತ್ರ ದೊರೆಯುತ್ತದೆ.

ಸರಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ 2 ಸಾವಿರ ರೂ.ವರೆಗಿನ ಶುಲ್ಕ ಪಾವತಿಗೆ, ಮೊಬೈಲ್‌ಗೆ 500 ರೂ.ಗಳವರೆಗೆ ಟಾಪಪ್ಸ್, ಸಹಕಾರಿ ಅಂಗಡಿಗಳಲ್ಲಿ ಒಮ್ಮೆಗೆ 5 ಸಾವಿರ ರೂ. ಪಾವತಿಸಿ ಖರೀದಿಸುವ ಸಂದರ್ಭ ಈ ಅವಕಾಶ ಲಭ್ಯವಿದೆ.

ಡಿ.3ರಿಂದ ಡಿ.15ರವರೆಗೆ ಟೋಲ್ ಗೇಟ್‌ಗಳಲ್ಲಿ ಟೋಲ್ ಶುಲ್ಕ ಪಾವತಿಗೆ ಈ 500 ರೂ. ನೋಟು ಬಳಸಬಹುದು.

ವಿದೇಶದ ನಾಗರಿಕರು ವಾರವೊಂದಕ್ಕೆ 5 ಸಾವಿರ ರೂ.ವರೆಗೆ ಹಣ ವಿನಿಮಯ ಮಾಡಿಸಿಕೊಳ್ಳಬಹುದು. ಈ ವ್ಯವಹಾರವನ್ನು ಅವರ ಪಾಸ್‌ಪೋರ್ಟ್‌ಗಳಲ್ಲಿ ನಮೂದಿಸಲಾಗುತ್ತದೆ.

ಬ್ಯಾಂಕ್ ಸಿಬ್ಬಂದಿ ಈ ನಿಯಮವನ್ನು ಉಲ್ಲಂಘಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಸುತ್ತೋಲೆ ಕಳಿಸಿದೆ. ಸರಕಾರದ ಯೋಜನೆಯಾದ ನಗದು ರಹಿತ ಆರ್ಥಿಕತೆಯ ಅನುಷ್ಠಾನದ ನಿಟ್ಟಿನಲ್ಲಿ ಇದೊಂದು ಮುಂದುವರಿದ ಕ್ರಮವಾಗಿದೆ ಎನ್ನಲಾಗಿದೆ. ದೇಶದಲ್ಲಿ ಪ್ರಸ್ತುತ 80 ಕೋಟಿ ಡೆಬಿಟ್ ಕಾರ್ಡ್‌ಗಳಿದ್ದು ಇದರಲ್ಲಿ 40 ಕೋಟಿ ಕಾರ್ಡ್‌ಗಳು ಸಕ್ರಿಯವಾಗಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದಾರೆ.

Please follow and like us:
error