ಹೊಸದಿಲ್ಲಿ , : ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪಕ್ಷದ ಸಹೋದ್ಯೋಗಿ ಅಂಬಿಕಾ ಸೋನಿ ಜೊತೆ ಇಂದು ಬೆಳಗ್ಗೆ ದಿಲ್ಲಿಯ ತಿಹಾರ್ ಜೈಲಿಗೆ ತೆರಳಿ ಕನಕಪುರದ ಶಾಸಕ , ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು . ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ . ಕಾಂಗ್ರೆಸ್ ನಾಯಕಿಯರ ಭೇಟಿಯ ವೇಳೆ
ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರಿದ್ದರು . ದಿಲ್ಲಿ ಹೈಕೋರ್ಟ್ ಶಿವಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಇಂದು ತನ್ನ ತೀರ್ಪು ಪ್ರಕಟಿಸಲಿದೆ . ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ( ಇ . ಡಿ . ) ಸೆಪ್ಟೆಂಬರ್ನಲ್ಲಿ ಶಿವಕುಮಾರ್ರನ್ನು ಬಂಧಿಸಿತ್ತು . ಶಿವಕುಮಾರ್ ತೆರಿಗೆ ವಂಚಿಸಿದ್ದಲ್ಲದೆ , ಕೋಟ್ಯಂತರ ರೂ . ವ್ಯವಹಾರ ನಡೆಸಿದ್ದಾರೆ ಎಂದು ಇ . ಡಿ . ತನಿಖಾಧಿಕಾರಿಗಳು ಆರೋಪಿಸಿದ್ದಾರೆ . ಕರ್ನಾಟಕದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೋಮವಾರ ತಿಹಾರ್ ಜೈಲಿಗೆ ತೆರಳಿ ಶಿವಕುಮಾರ್ರನ್ನು ಭೇಟಿಯಾಗಿದ್ದರು . ಶಿವಕುಮಾರ್ರನ್ನು ರಾಜಕೀಯ ಸೇಡಿಗಾಗಿ ಗುರಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು “
ಡಿಕೆಶಿ ಭೇಟಿಯದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ
Please follow and like us: