ಜವಾಹರ್ ಲಾಲ್ ನೆಹರೂ ‘ ಅತಿದೊಡ್ಡ ಅತ್ಯಾಚಾರಿ – ಸಾದ್ವಿ ಪ್ರಾಚಿ

ಮೀರತ್ , ಡಿ . 8 : ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ‘ ಅತಿದೊಡ್ಡ ಅತ್ಯಾಚಾರಿ ‘ ಎಂದು ರವಿವಾರ ಕರೆಯುವ ಮೂಲಕ ವಿಶ್ವವಿಹಿಂದೂ ಪರಿಷತ್ ನಾಯಕಿ ಸಾದ್ವಿ ಪ್ರಾಚಿ ವಿವಾದ ಸೃಷ್ಟಿಸಿದ್ದಾರೆ . ‘ ಭಾರತ ಜಗತ್ತಿನ ಅತ್ಯಾಚಾರದ ರಾಜಧಾನಿ ‘ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ 

ಪ್ರತಿಕ್ರಿಯಿಸಿದ ಸಾದ್ವಿ ಪ್ರಾಚಿ , ‘ ‘ ನಮ್ಮ ದೇಶ ರಾಮ , ಕೃಷ್ಣ ಜನಿಸಿದ ನಾಡು . ರಾಹುಲ್ ಗಾಂಧಿ ಏನು ಹೇಳುವುದು ? ರಾಮ ಹಾಗೂ ಕೃಷ್ಣ ಸಂಸ್ಕೃತಿಯನ್ನು ನಾಶಗೊಳಿಸಿದ ನೆಹರೂ ಅವರು ಅತಿ ದೊಡ್ಡ ಅತ್ಯಾಚಾರಿ ” ಎಂದರು . “ ಭಯೋತ್ಪಾದನೆ , ನಕ್ಸಲ್‌ವಾದ , ಭ್ರಷ್ಟಾಚಾರ ಹಾಗೂ ಅತ್ಯಾಚಾರ ನೆಹರೂ ಕುಟುಂಬದ ಕೊಡುಗೆ ‘ ‘ ಎಂದು ಅವರು ತಿಳಿಸಿದರು . ಭಾರತವನ್ನು ಜಗತ್ತಿನ ಅತ್ಯಾಚಾರದ ರಾಜಧಾನಿ ಎಂದು ಕರೆಯಲಾಗುತ್ತಿದೆ . ಮಹಿಳೆಯರನ್ನು ರಕ್ಷಿಸಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಇತರ ದೇಶಗಳು ಅಚ್ಚರಿ ಪಡುತ್ತಿವೆ ಎಂದು ರಾಹುಲ್ ಗಾಂಧಿ ಶನಿವಾರ ವಯನಾಡ್‌ನಲ್ಲಿ ಹೇಳಿದ್ದರು

Please follow and like us:
error