ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಅತ್ಯಾಚಾರ

rapeಹೊಸದಿಲ್ಲಿ,ನ. 20: ದಿಲ್ಲಿಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬಳನ್ನು ದೋಚಿ ನಂತರ ಅತ್ಯಾಚಾರ ವೆಸಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ ಶಾಹದರ್ ಮತ್ತು ಹಳೆ ದಿಲ್ಲಿಗೆ ಚಲಿಸುವ ರೈಲಿನ ಲೇಡಿಸ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ 32ವರ್ಷದ ಮಹಿಳೆಯನ್ನು ಅತ್ಯಾಚಾರಗೈಯಲಾಗಿದೆ.

ಐವರು ಮಹಿಳೆಯರು ಮಾತ್ರ ಲೇಡಿಸ್ ಕಂಪಾರ್ಟ್‌ಮೆಂಟ್‌ನಲ್ಲಿದ್ದರು. ಇವರಲ್ಲಿ ನಾಲ್ವರು ಶಾಹದರದಲ್ಲಿ ಇಳಿದಿದ್ದರು. ಈ ಸಮಯದಲ್ಲಿ ಅಲ್ಲಿಂದಮೂವರು ಪುರುಷರು ಮಹಿಳೆಯರ ಕೋಚ್‌ಗೆ ಹತ್ತಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯ ಬ್ಯಾಗ್ ಮತ್ತು ಇತರ ವಸ್ತುಗಳನ್ನು ಕಿತ್ತುಕೊಂಡು ಓಡಿಹೋಗಿದ್ದಾರೆ. ಮೂರನೆ ವ್ಯಕ್ತಿಯು ಮಹಿಳೆಯನ್ನು ಅತ್ಯಾಚಾರಗೈದಿದ್ದಾನೆ. ಅಷ್ಟರಲ್ಲಿ ರೈಲಿನಲ್ಲಿದ್ದ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಬೋಗಿಗೆ ಬಂದು ಶಹಬಾಸ್(25) ಎಂಬ ಯುವಕನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು, ಆಕೆ ಬಿಹಾರದವಳಾಗಿದ್ದು, ತನ್ನ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳುತ್ತಿದ್ದರೆಂದು ವರದಿತಿಳಿಸಿದೆ.

Related posts

Leave a Comment