ಗೋವಾದಲ್ಲಿ ಸೈಕ್ಲಿಂಗ್ ಮಾಡಿದ ಸೋನಿಯಾಗಾಂಧಿ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೋವಾಗೆ ಶಿಫ್ಟ್ ಆಗಿದ್ದಾರೆ . ನವದೆಹಲಿಯಲ್ಲಿನ ವಿಪರೀತ ವಾಯುಮಾಲಿನ್ಯ ಸಮಸ್ಯೆಯಿಂದಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಗೋವಾಕ್ಕೆ ಶಿಫ್ಟ್ ಆಗಿದ್ದಾರೆ . ಒಂದು ವಾರದ ಹಿಂದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರು ಇಲ್ಲಿಗೆ ಬಂದಿದ್ದು ಸಧ್ಯ ಎಲ್ಲವನ್ನೂ ಮರೆತು ಆರೋಗ್ಯದತ್ತ ಗಮನ ಹರಿಸಿದ್ದಾರೆ.ತಾವಾಯಿತು ತಮ್ಮ ಆರೋಗ್ಯವಾಯಿತೆಂದುಕೊಂಡು ಗೋವಾದ ಲೀಲಾ ಪ್ಯಾಲೇಶ್‌ ಹೊಟೇಲ್ ವೊಂದರಲ್ಲಿ ಕಾಲ ಕಳೆಯುತ್ತಿದ್ದಾರೆ.ವಾಕಿಂಗ್ ಯೋಗ ಸೇರಿದಂತೆ ಸೈಕ್ಲಿಂಗ್ ಮಾಡ್ತಾ ಇದ್ದಾರೆ.ಗೋವಾದ ಹೊಟೇಲ್‌ ಲೀಲಾ ರೀಸ್ ನಲ್ಲಿ ತಂಗಿದ್ದು ಸೈಕ್ಲಿಂಗ್ ಮಾಡ್ತಾ ಇರುವ ದೃಶ್ಯಗಳು ಕಂಡು ಬಂದಿದ್ದು ಕನ್ನಡನೆಟ್ ಗೆ ಲಭ್ಯವಾಗಿವೆ . ಈ ಹಿಂದೆ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದಾಗ ವೈದ್ಯರು ವಾಯುಮಾಲಿನ್ಯ ಕಡಿಮೆ ಇರುವ ಪ್ರದೇಶದಲ್ಲಿ ಸಮಯ ಕಳೆಯುವಂತೆ ಸೂಚಿಸಿದ್ದರು.ಹೀಗಾಗಿ ಈ ಹಿಂದೆ ವೈದ್ಯರು ನೀಡಿದ್ದ ಸಲಹೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಪಣಜಿಗೆ ಆಗಮಿಸಿದ್ದಾರೆ .

ಕೈ ತಿಂಗಳಿನಲ್ಲಿ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ರೀತಿಯ ವೈದ್ಯಕೀಯ ನಿಗಾವಣೆಯಲ್ಲಿದ್ದರು . ಅವರಿಗೆ ನಿರಂತರವಾಗಿ ಕಾಡುತ್ತಿರುವ ಸೋಂಕಿನ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು . ಹೀಗಾಗಿ ವೈದ್ಯರ ಸೂಚನೆಯಂತೆ ಗೋವಾಕ್ಕೆ ಬಂದಿದ್ದಾರೆ . ದೆಹಲಿಯಲ್ಲಿನ ಮಾಲಿನ್ಯದ ಕಾರಣ ಒಂದೆಡೆಯಾದರೆ ಮತ್ತೊಂದು ಕಡೆ ಆರೋಗ್ಯದ ದೃಷ್ಟಿಯಿಂದ ಗೋವಾಗೆ ಬಂದಿದ್ದಾರೆ.ಎಲ್ಲವನ್ನೂ ಮರೆತು ಸಧ್ಯ ತಾವಾಯಿತು ತಮ್ಮ ಆರೋಗ್ಯವಾಯಿತು ಎಂದುಕೊಂಡು ಯೋಗ ವಾಯು ವಿಹಾರ ಸೇರಿದಂತೆ ಸೈಕ್ಲಿಂಗ್ ಕೂಡಾ ಮಾಡ್ತಾ ಇದ್ದಾರೆ .

Please follow and like us:
error