ಗಿರೀಶ ಕಾರ್ನಾಡ ಇನ್ನಿಲ್ಲ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡದ ಹೆಸರಾಂತ ಲೇಖಕ , ಚಿಂತಕ , ಜಾತ್ಯಾತೀತವಾದಿ ಗಿರೀಶ್ ಕಾರ್ನಾಡ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ . ಹಲವಾರು ತಿಂಗಳುಗಳಿಂದ ಉಸಿರಾಟ ಮತ್ತು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ

ಸಾವನ್ನಪ್ಪಿದ್ದಾರೆ . _ 81 ವರ್ಷದ ಗಿರೀಶ್ ಕಾರ್ನಡ್‌ರವರು ತಮ್ಮ ಜೀವಿತದ ಕೊನೆಯವರೆಗು ತಾವು ನಂಬಿದ ತತ್ವಗಳ ಪರವಾಗಿ ದನಿ ಎತ್ತಿದವರು . ಕಳೆದ ವರ್ಷ ನಡೆದ ಮೀ ಟೂ ಅರ್ಬನ್ ನಕ್ಸಲ್ ಚಳವಳಿಯಲ್ಲಿ ಸಹ ಗುರುತಿಸಿಕೊಂಡಿದ್ದರು . 2018ರ ಸೆಪ್ಟೆಂಬರ್ 05ರಂದು ಗೌರಿ ಹತ್ಯೆ ವಿರೋಧಿ ಒಕ್ಕೂಟದಿಂದ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನಾರೋಗ್ಯದ ನಡುವೆಯೂ ‘ ಮೀ ಟೂ ಅರ್ಬನ್ ನಕ್ಷಲ್ ‘ ಫಲಕವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಭಾಗವಹಿಸಿ ಗಮನ ಸೆಳೆದಿದ್ದರು . ತಲೆದಂಡ , ಯಾಯಾ , ತುಘಲಕ್ , ಟಿಪ್ಪು ಕಂಡ ಕನಸು ಸೇರಿದಂತೆ ಹಲವು ಅತ್ಯುತ್ತಮ ನಾಟಕಗಳನ್ನು ರಚಿಸಿ ಪ್ರಸಿದ್ದರಾಗಿದ್ದ ಇವರು ಕನ್ನಡದ ಮಹತ್ವದ ಚಿಂತಕರಾಗಿದ್ದರು . ಗಿರೀಶ್ ಕಾರ್ನಡ್‌ರವರ ನಿಧನದ ಹಿನ್ನೆಲೆಯಲ್ಲಿ ಹಲವು ಗಣ್ಯರು , ಲೇಖಕರು ಸಂತಾಪ ವ್ಯಕ್ತಪಡಿಸಿದ್ದಾರೆ . TAGS ಅರ್ಬನ್ ನಕ್ಸಲ್ | ಗಿರೀಶ್ ಕಾರ್ನಾಡ್ ಟಿಪ್ನ ಕಂಡ ಕನಸ

Please follow and like us:
error