ಗಿನ್ನಿಸ್ ದಾಖಲೆ ನಿರ್ಮಿಸಿದ 9 ವರ್ಷದ ಸ್ವರೂಪ್ ಗೌಡ….!

ಉಸಿರು ಬಿಗಿ ಹಿಡಿದು ಸ್ಕೇಟಿಂಗ್ ನೋಡುತ್ತಿರುವ ಜನ, ಇನ್ನೊಂದು ಕಡೆ ಕಾರಿನ ಕೆಳಗೆ ಸ್ಕೇಟಿಂಗ್ ಮಾಡುತ್ತಿರುವ ಪುಟ್ಟ ಬಾಲಕ. ಕಡೆಗೂ ಆತ ಗಿನ್ನಿಸ್ ದಾಖಲೆ ನಿರ್ಮಿಸಿದ. ಈ ದೃಶ್ಯ ಕಂಡಿದ್ದು ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ, ಬೆಂಗಳೂರಿನ 9 ವರ್ಷದ ಬಾಲಕ 37 ಟಾಟಾ ಸುಮೋ ಕೆಳಗೆ 65 ಮೀಟರ್ ದೂರ ತೆವಳಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಒಂದನೇ ತರಗತಿಯಲ್ಲಿ ಓದುತ್ತಿರುವ ಸ್ವರೂಪ್ ಗೌಡ ಓರಾಯನ್ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾನೆ, ಸ್ಕೇಟಿಂಗ್ ವಿಭಾಗದಲ್ಲಿ ಮೊದಲಿನಿಂದಲೂ ಆಸಕ್ತಿಯಿರುವ ಸ್ವರೂಪ್ ಗೌಡ ಅಂತೂ ಈ ಸಾಧನೆ ಮೂಲಕ ವಿಶ್ವದಾಖಲೆ ನಿರ್ಮಿಸಿದ, ರೋಡ್ ರೇಸಿಂಗ್, ಇನ್ ಲೈನ್ ರೇಸ್ ವಿಭಾಗಗಳಲ್ಲಿ ಸ್ವರೂಪ್ ಗೌಡ ಈಗಾಗಲೇ ಹಲವು ದಾಖಲೆ ಮಾಡಿದ್ದಾನೆ, ಸ್ವರೂಪ್ ಪೋಷಕರು ಕೂಡ ಮಗನಿಗೆ ಬೆಂಬಲವಾಗಿ ನಿಂತಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಕೇಟಿಂಗ್ ಸ್ಪರ್ಧೆಗಳು ನಡೆದರೂ ಅಲ್ಲಿಗೆ ಸ್ವರೂಪ್‌ನನ್ನು ಕರೆದೊಯ್ಯುತ್ತಾರೆ, ಇನ್ನು ಮಗskatingನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಬಾಲಕನ ತಂದೆ ಯೋಗೀಶ್, ಸ್ವರೂಪ್ ಮೊದಲಿನಿಂದಲೂ ಸ್ಕೇಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ. ಇದಲ್ಲದೆ ಇತರೆ ವಿಭಾಗಳಲ್ಲಿ ದಾಖಲೆ ನಿರ್ಮಿಸಿದ್ದಾನೆ ಎಂದರು.

Please follow and like us:
error