ಖ್ಯಾತ ಹಿಂದಿ ಚಿತ್ರನಟ ಇರ್ಫಾನ್ ಖಾನ್ ನಿಧನ

ಮುಂಬೈ ,: ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದಿ ಚಿತ್ರನಟ ಇರ್ಫಾನ್ ಖಾನ್ ( 53 ) ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ . ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು . ಖಾನ್ ಅವರು ಪತ್ನಿ ಸುತಾಪಾ ಸಿಕ್ಸರ್ ಹಾಗೂ ಇಬ್ಬರು ಪುತ್ರರು ಸಹಿತ ಅಪಾರ ಬಂಧು ಬಳಗ , ಅಭಿಮಾನಿಗಳನ್ನು ಅಗಲಿದ್ದಾರೆ .

Please follow and like us:
error