ಕೋಮುವಾದಕ್ಕೆ  ಕೋಮುವಾದ ಉತ್ತರವಲ್ಲ 

ಕೋಮುವಾದಿಗಳ ಆಟಾಟೋಪಕ್ಕೆ ಬೆದರಿ ಸ್ವರಕ್ಷಣೆಗಾಗಿ ಹಾಗೂ ಆರೆಸ್ಸೆಸ್ ಅನ್ನು ಎದುರಿಸಲು ಅಲ್ಪಸಂಖ್ಯಾತ ಯುವಕರು ಮೂಲಭೂತವಾದಿ ಸಂಘಟನೆಗಳ ಜೊತೆ ಕೈಜೋಡಿಸುವುದು ಅನಿವಾರ್ಯ ಎಂದು ಭಾವಿಸಿದ್ದಾರೆ. ಅದು ಸರಿಯಲ್ಲ. ಒಂದು ಬಗೆಯ ಕೋಮುವಾದವನ್ನು ಮತ್ತೊಂದರಿಂದ ಸೋಲಿಸಲಾಗದು. ಅಲ್ಪಸಂಖ್ಯಾತ ಕೋಮುವಾದವು ಬಹುಸಂಖ್ಯಾತ ಕೋಮುವಾದವನ್ನು ಮಣಿಸಲಾರದು; ಏಕೆಂದರೆ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಅವು ಒಂದಕ್ಕೊಂದು ಪೂರಕವಾಗಿರುತ್ತವೆ. ಜಾಗತಿಕವಾಗಿ ಹರಡಿರುವ ಐಸಿಸ್, ಇಸ್ಲಾಮೋಫೋಬಿಯಾವನ್ನು ಹುಟ್ಟುಹಾಕಿದೆ. ಮುಸ್ಲಿಂ ಮೂಲಭೂತವಾದವು ನವ ಉದಾರವಾದ ಮತ್ತು ಕೋಮುವಾದಗಳನ್ನು ಹೇರುತ್ತಿರುವ ಮೋದಿ ಸರ್ಕಾರಕ್ಕೆ ಕುಮ್ಮಕ್ಕು ನೀಡುತ್ತಿದೆ. 

~ ಮಹಮ್ಮದ್ ರಿಯಾಜ್ @ ಉದ್ಘಾಟನಾ ಭಾಷಣದಲ್ಲಿ 
#MuslimYouthConference  #DYFI

Please follow and like us:

Leave a Reply