ಕಾರ್ಗಿಲ್ ವಿಜಯ ದಿನ….!

26-07-1999 ವರ್ಷದ ಹಿಂದೆ ಇದೇ ದಿನ ಇಡೀ ಭಾರತ ದೇಶವೆ ಅಂದು ಏಕಾಗ್ರತೆಯಿಂದ ದೇವರಲ್ಲಿ ಪ್ರಾರ್ಥಿಸುತ್ತ ಕುಳಿತಿದ್ದ ಸಂದರ್ಭ. ತಾಯಿ ಭಾರತ ಮಾತೆಯ ಕೆಚ್ಚೆದೆಯ ಗಂಡುಗಲಿಗಳು ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹಗಲಿರುಳೆನ್ನದೆ ನುಸುಳುಕೋರರು ವಶಪಡಿಸಿಕೊಂಡಿದ್ದ ಭಾರತದ ಕೆಲ ಭಾಗಗಳನ್ನು ಮತ್ತೆ ಮರಳಿ ಪಡೆಯಲು ರಣರಂಗದಲ್ಲಿ ರೌದ್ರಾವತಾರ ತಾಳಿ ವೀರಾವೇಶದಿಂದ ಹೋರಾಡುತ್ತಿದ್ದರು. 60 ದಿನಗಳ ಕಾಲ ಸತತವಾಗಿ ಭಾರತಾಂಬೆಯ ಪುತ್ರರಾದ ನಮ್ಮ ವೀರ ಭಾರತೀಯ ಸೈನಿಕರು ಹೋರಾಡಿ ತಮ್ಮ ಗುರಿಯನ್ನು ಸಾಧಿಸಿದಾಗ ದಿನಾಂಕ  26 ಜುಲೈ 1999. ಆ ಒಂದು ದಿನವೆ ಕಾರ್ಗಿಲ್ ವಿಜಯ ದಿನವಾಗಿ ಭಾರತದೆಲ್ಲೆಡೆ ಬಲು ಸಂಭ್ರಮದಿಂದ ಆಚರಿಸಲಾಯಿತು. ಹೀಗೆ ಘನಗೋರವಾಗೆ ನಡೆದ ಯುದ್ಧವೆ ಕಾರ್ಗಿಲ್ ಯುದ್ಧ. ಕಾರ್ಗಿಲ್ ವಿಜಯ ದಿನ ಎಂಬುದು ಹಲವು ಕಾರಣಕ್ಕಾಗಿ ಸ್ಮರಣೀಯ ದಿನ. ಆದರೆ ಭಾರತೀಯರಿಗೆ ದೇಶ ಸೇವೆಗಾಗಿ ಮುಡಿಪಾಗಿರುವ ನಮ್ಮ ಸೇನಾಪಡೆಗಳು ಮತ್ತು ಅವರ ಕುಟುಂಬಗಳ ಸ್ವಾರ್ಥರಹಿತ ಮತ್ತು ವೃತ್ತಿಪರ ಬದ್ಧತೆಯನ್ನು ಪ್ರತಿನಿಧಿಸುವ ದಿನ. ನಮ್ಮ ಸೇನಾ ಪಡೆಗಳ ಅಚಲ ದೇಶಭಕ್ತಿಯನ್ನು ಮತ್ತೆ – ಮತ್ತೆ ಸಾರುವ ದಿನ. ಅವರ ಆ ನಿಸ್ವಾರ್ಥ ಸೇವೆಯ ಹೋರಾಟದಲ್ಲಿ ದೇಶಕ್ಕಾಗಿ ಜೀವ ತೆತ್ತ ಹುತಾತ್ಮರಿಗೆ ನಮನ ಸಲ್ಲಿಸುವ ಹೊತ್ತಲ್ಲಿ ನಾವು ಯೋಚಿಸಲೇಬೇಕಾದ ಮತ್ತೊಂದು ಸಂಗತಿಯೆಂದರೆ kargilಇವತ್ತು ನಮ್ಮ ನಡುವೆ ಅಂತಹ ಮಹಾನ್ ಸೇನಾನಿಗಳಿಗೆ ನಾವು ನೀಡಿರುವ ಸ್ಥಾನಮಾನವೇನು ಎಂಬುದು. ದೇಶಕ್ಕಾಗಿ ಪ್ರಾಣಪಣಕ್ಕಿಟ್ಟು ಹೋರಾಡುವ ಈ ಸಮವಸ್ತ್ರಧಾರಿ ಸೇನಾನಿಗಳಿಗೆ ನಮ್ಮ ವ್ಯವಸ್ಥೆಯಲ್ಲಿರುವ ಘನತೆ-ಗೌರವಗಳೇನು ಎಂಬುದನ್ನು ಪುನರಾವಲೋಕನ ಮಾಡುವ ದಿನ ಕೂಡ ಇದು.

Please follow and like us:
error