ಇನ್ನು ಮುಂದೆ ರಾಮ ಮಂದಿರ ಬಿಟ್ಟು ನೈಜ ಸಮಸ್ಯೆಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ : ಉಮಾ ಭಾರತಿ

ಹೊಸದಿಲ್ಲಿ : ” ಇನ್ನು ಮುಂದೆ ಚುನಾವಣೆಗಳನ್ನು ರಾಮ 
ಮಂದಿರ ವಿಚಾರ ಮುಂದಿಟ್ಟುಕೊಂಡು ಎದುರಿಸಲಾಗುವುದಿಲ್ಲ . ಬದಲಾಗಿ ಇನ್ನು ಮುಂದೆ ವಸತಿ , ಆಹಾರ , ಶಿಕ್ಷಣ ಮುಂತಾದ ನಿಜವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸಲಾಗುವುದು ‘ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಅಯೋಧ್ಯೆ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದಾರೆ . ` ` ಈ ತೀರ್ಪು ಭಾರತದ ರಾಜಕಾರಣಕ್ಕೆ ಹೊಸ ದಿಕ್ಕು ನೀಡುವುದು , ಈ ಉತ್ತಮ ಮತ್ತು ನಿಷ್ಪಕ್ಷಪಾತ ತೀರ್ಪನ್ನು ಸ್ವಾಗತಿಸುತ್ತೇನೆ , ಇಡೀ ದೇಶ ಈ ತೀರ್ಪನ್ನು ಸ್ವಾಗತಿಸುವುದನ್ನು ನೋಡಿ ಖುಷಿಯಾಗುತ್ತದೆ . ” ಎಂದು ಹೇಳಿದರು . ` ` ನಾನು ಅಯೋಧ್ಯೆಯ ರಸ್ತೆಗಳಲ್ಲಿದ್ದಾಗ ಎಲ್ಲಿ ನನ್ನನ್ನು ಗುಂಡಿಕ್ಕಿ ಸಾಯಿಸಲಾಗುವುದೋ ಎಂದು ಹಿಂದೆ ಅನಿಸಿತ್ತು . ಇದೀಗ ಭಾವಪರವಶಳಾಗಿದ್ದೇನೆ ‘ ಎಂದು ಹೇಳಿದ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹೇಳಿಕೆಯ ಬಗ್ಗೆ . ಪ್ರತಿಕ್ರಿಯಿಸಲು ನಿರಾಕರಿಸಿದರು . ಅಯೋಧ್ಯೆ ಆಂದೋಲನದಲ್ಲಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯ ಪಾತ್ರವನ್ನು ಹೊಗಳಿದ ಉಮಾ ಭಾರತಿ ‘ ಅಡ್ವಾಣೀಜಿ ನನ್ನ ನಾಯಕ , ಅವರು ನಕಲಿ ಜಾತ್ಯತೀತತೆಯನ್ನು ಬಯಲುಗೊಳಿಸಿದರು ‘ ಎಂದು ಹೇಳಿದರು . ಅಡ್ವಾಣಿಯವರನ್ನು ಭೇಟಿಯಾದ ಉಮಾ ಭಾರತಿ ‘ ` ಬಿಜೆಪಿ ಹಾಗೂ ಅಯೋಧ್ಯೆ ಅಭಿಯಾನವನ್ನು ಈ ಹಂತಕ್ಕೆ ತರುವಲ್ಲಿ ಅವರು ಶ್ರಮಿಸಿದ್ದರು ‘ ಎಂದರು . 

Please follow and like us:
error