ಆರ್ ಟಿಐ ವ್ಯಾಪ್ತಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿ : ಸುಪ್ರೀಂ ಕೋರ್ಟ್ ತೀರ್ಪು 

ಹೊಸದಿಲ್ಲಿ ನ . 12 : ಭಾರತದ ಮುಖ್ಯ ನ್ಯಾಯಾಧೀಶರ ( ಸಿಜೆಐ ) ಕಚೇರಿ ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ . ಸಿಜೆಐಯವರ ಕಚೇರಿ ಸರ್ಕಾರಿ ಪ್ರಾಧಿಕಾರ ಆಗಿರುವುದರಿಂದ ಅದನ್ನೂ ಆರ್ ಟಿಐ ( ಮಾಹಿತಿ ಹಕ್ಕು ಕಾಯ್ದೆಯಡಿ | ಸೇರಿಸಬೇಕು ಎಂದು ದಿಲ್ಲಿ ಹೈಕೋರ್ಟ್ 2010ರ ಜನವರಿಯಲ್ಲಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಪ್ರಧಾನ 
ಕಾರ್ಯದರ್ಶಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿ ಈ ಆದೇಶ ಹೊರಬಿದ್ದಿದೆ . ಆರ್ ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರ್ ವಾಲ್ ಪರ ವಾದ ಮಂಡಿಸಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ , ಸಿಜೆಐ ಕಚೇರಿ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನ್ನು ಆರ್‌ಟಿಐ ವ್ಯಾಪ್ತಿಯಡಿ ತರಬೇಕು ಎಂದು ಪ್ರತಿಪಾದಿಸಿದ್ದರು . “ 

Please follow and like us:
error