ಆರ್‍ಎಸ್‍ಎಸ್ ಪಥಸಂಚಲನ : ಅಮರೇಶ ಕರಡಿ ಭಾಗೀ

ಕೊಪ್ಪಳ: ವಿಜಯ ದಶಮಿ ದಿನದಂದು, 92 ವರ್ಷಗಳ ಹಿಂದೆ 27 ಸೆಪ್ಟೆಂಬರ್ 1925ರಂದು ಸ್ಥಾಪನೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಬುಧವಾರ

ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.
ಗಡಿಯಾರ ಕಂಬದಿಂದ ಪ್ರಾರಂಭವಾದ ಪಥ ಸಂಚಲನ ನಗರದ ಪ್ರಮುಖ ರಸ್ತೆಯಾದ ಜವಾಹರ ರಸ್ತೆಯಲ್ಲಿ ಸಾಗಿಬಂದಿತು. ಡ್ರಮ್ ಸದ್ದಿನೊಂದಿಗೆ ನಡೆದ ಆಕರ್ಷಕ ಕವಾಯತು ದಾರಿಹೋಕರನ್ನು ಹಾಗೂ ಅಂಗಡಿಕಾರರನ್ನು ಆಕರ್ಷಿಸಿತು. ಕೆಲವೆಡೆ ಜನತೆ ಸ್ವಯಂಪ್ರೇರಣೆಯಿಂದ ಹೂವಿನ ಸುರಿಮಳೆಗೈಯುವ ಮೂಲಕ ಪ್ರೋತ್ಸಾಹ ನೀಡಿದರು.
ಬಿಜೆಪಿ ಯುವಮುಖಂಡ ಅಮರೇಶ ಕರಡಿ ಸಹಿತ ಹಲವಾರು ಮುಖಂಡರು ಸಾಮಾನ್ಯ ಕಾರ್ಯಕರ್ತರಂತೆ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

Related posts