ಆಪರೇಶನ್ ಕಮಲ : ಆಡಿಯೋ ಸಾಕ್ಷಿಯಾಗಿ ಪರಿಗಣಿಸಲು ಸುಪ್ರೀಂಗೆ ಕಾಂಗ್ರೆಸ್ ಅರ್ಜಿ

ಹೊಸದಿಲ್ಲಿ , ನ . 4 : ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಆಪರೇಶನ್ ಕಮಲಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷಿಯಾಗಿ 

ಪರಿಗಣಿಸಲು ಸೋಮವಾರ ಸುಪ್ರೀಂ ಕೋರ್ಟ್ ಗೆ ಕಾಂಗ್ರೆಸ್ ಅರ್ಜಿ ಸಲ್ಲಿಸಿದೆ . ನ್ಯಾಯಮೂರ್ತಿ ರಮಣ್ ಪೀಠದ ಮುಂದೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಆಡಿಯೋವನ್ನು ಸಲ್ಲಿಸಿ ಇದರ ವಿಚಾರಣೆಗೆ ಪ್ರತ್ಯೇಕ ಪೀಠ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದರು . ” ಕೋರ್ಟ್ ತೀರ್ಪು ಕಾಯ್ದಿರಿಸಿದ ಬಳಿಕ ನಮಗೆ ಮಹತ್ವದ ಸಾಕ್ಷಿ ಸಿಕ್ಕಿದೆ . ದಯವಿಟ್ಟು ಇದನ್ನು ಪರಿಗಣಿಸಬೇಕು ‘ ಎಂದು ಅವರು ಹೇಳಿದರು . ಮುಖ್ಯ ನ್ಯಾಯಮೂರ್ತಿ ಒಪ್ಪಿದರೆ ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯಲಿದೆ ಎಂದು ನ್ಯಾಯಮೂರ್ತಿ ರಮಣ್ ಹೇಳಿದರು .

Please follow and like us:
error