ಅಪ್ರಾಪ್ತೆಯ ಅಪಹರಣ , ಅತ್ಯಾಚಾರ : ಮಾಜಿ ಬಿಜೆಪಿ ಶಾಸಕ ಸೇಂಗರ್ ದೊಷಿ

ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ : 2017ರ ಅಪ್ರಾಪ್ರೆಯೊಬ್ಬಳ ಅಪಹರಣ , ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸೇಂಗ‌ ದೋಷಿ ಎಂದು ದಿಲ್ಲಿ ಹೈಕೋರ್ಟ್ ಘೋಷಿಸಿದೆ . ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಲಕ್ಕೋ ಕೋರ್ಟ್ ನಿಂದ ದಿಲ್ಲಿ ಹೈಕೋರ್ಟ್ ಗೆ ಪ್ರಕರಣ ವರ್ಗಾವಣೆಯಾದ ನಂತರ ಸೆಶನ್ ನ್ಯಾಯಾಧೀಶ ಧರ್ಮೇಶ್ ಶರ್ಮಾ ಆಗಸ್ಟ್ 5ರಿಂದ ಈ ಪ್ರಕರಣದ ವಾದವಿವಾದಗಳನ್ನು ಆಲಿಸಿದ್ದರು . 2017ರಲ್ಲಿ ಸೇಂಗರ್ ತನ್ನನ್ನು ಅತ್ಯಾಚಾರಗೈದಿದ್ದ ಎಂದು ಈಗ 19 ವರ್ಷದವಳಾಗಿರುವ ಯುವತಿ ಆರೋಪಿಸಿದ್ದಳು . ಉತ್ತರಪ್ರದೇಶದ ಬಂಗೆಮಾವು ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿದ್ದ ಸೆಂಗಾರ್‌ನನ್ನು 2019ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು .

Please follow and like us:
error