28- 29ರಂದು ಕೊಪ್ಪಳದಲ್ಲಿ ಉದ್ಯೋಗ ಮೇಳ

ಉದ್ಯೋಗ ಮೇಳ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡಿದರೆ, ಇಡೀ ಕುಟುಂಬಕ್ಕೇ ನೆರವಾದಂತೆ. ಈ ಹಿನ್ನೆಲೆಯಲ್ಲಿ, ಅರ್ಹ ಹಾಗೂ ಆಸಕ್ತ ಯುವಜನತೆಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಸಂಸದ ಸಂಗಣ್ಣ ಕರಡಿ ಅವರು ಉದ್ಯೋಗ ಮೇಳವನ್ನು ಕೊಪ್ಪಳದಲ್ಲಿ ಆಯೋಜಿಸಿದ್ದಾರೆ. ಇದಕ್ಕೆ ಸಂಬಂದಸಿದ ವೆಬ್ ಸೈಟ್ ಗೆ ಸಂಸದ ಕರಡಿ ಸಂಗಣ್ಣ ಚಾಲನೆ ನೀಡಿದರು. ಅಮರೇಶ ಕರಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

2017 ಅಕ್ಟೋಬರ್ 28 ಹಾಗೂ 29ರಂದು ಕೊಪ್ಪಳ ನಗರದ ಹೊರವಲಯದ ಮಿಲೇನಿಯಂ ಪಬ್ಲಿಕ್ ಸ್ಕೂಲ್ ಕ್ಯಾಂಪಸ್‍ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಉದ್ಯೋಗ ಮೇಳದಲ್ಲಿ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಸುಮಾರು 50ರಿಂದ 70 ದೊಡ್ಡ ಹಾಗೂ ಮಧ್ಯಮಗಾತ್ರದ ಕಂಪನಿಗಳು ಪಾಲ್ಗೊಳ್ಳಲಿವೆ. ಇದೊಂದು ಉಚಿತ ಕಾರ್ಯಕ್ರಮವಾಗಿದ್ದು, ಆಸಕ್ತ ಹಾಗೂ ಅರ್ಹ ಆಕಾಂಕ್ಷಿಗಳು ಉದ್ಯೋಗವಕಾಶಗಳನ್ನು ಸುಲಭವಾಗಿ ಪಡೆಯಲು ಅವಕಾಶವಿದೆ.

ವಿದ್ಯಾರ್ಹತೆ

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್, ಎಂಜಿನಿಯರಿಂಗ್, ಮೆಡಿಕಲ್, ಅಗ್ರಿ, ಪದವಿ, ಸ್ನಾತಕೋತ್ತರ- ಹೀಗೆ ವಿವಿಧ ಹಂತಗಳ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ ಕೆಲಸ ಮಾಡುತ್ತಿರುವವರು ಸಹ, ಉತ್ತಮ ಉದ್ಯೋಗದ ಅವಕಾಶಗಳನ್ನು ಪಡೆಯಲು ಪಾಲ್ಗೊಳ್ಳಬಹುದು.

ಎರಡು ದಿನಗಳ ಮೇಳ

ಉದ್ಯೋಗ ಮೇಳ 2017 ಅಕ್ಟೋಬರ್ 28 ಹಾಗೂ 29ರಂದು ನಡೆಯಲಿದೆ.

ದಿನ-1

ಮೊದಲ ದಿನ, ಅಕ್ಟೋಬರ್ 28ರಂದು, ಅಭ್ಯರ್ಥಿಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಅಭ್ಯರ್ಥಿಗಳು ಉತ್ತಮ ಅವಕಾಶಗಳನ್ನು ಗಿಟ್ಟಿಸಲು ಏನೆಲ್ಲ ಸಿದ್ಧತೆ ಹೊಂದಿರಬೇಕು? ತಮ್ಮ ಸ್ವವಿವರ (ಬಯೋಡೇಟಾ, ರೆಸ್ಯೂಮ್, ಸಿವಿ) ಹೇಗೆ ಸಿದ್ಧಪಡಿಸಬೇಕು, ಸಂದರ್ಶನದಲ್ಲಿ ಅವರ ಪ್ರಸ್ತುತಿ ಹೇಗಿರಬೇಕು, ಯಾವ ವಿಷಯಗಳ ಕುರಿತು ಸಂದರ್ಶಕರು ಪ್ರಶ್ನೆ ಕೇಳುತ್ತಾರೆ, ಅದಕ್ಕೆ ಹೇಗೆ ಉತ್ತರಿಸಬೇಕು, ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಹೇಗಿರಬೇಕು, ಉತ್ತಮ ಉದ್ಯೋಗದ ಅವಕಾಶಗಳನ್ನು ಪಡೆಯುವುದು ಹೇಗೆ, ನಮ್ಮಲ್ಲಿರುವ ಕೌಶಲ್ಯವನ್ನು, ವಿಶೇಷತೆಗಳನ್ನು ಹೇಗೆ ಬಿಂಬಿಸಬೇಕು, ನಮ್ಮ ಬಾಹ್ಯ ಹಾಗೂ ಆಂತರಿಕ ಸಿದ್ಧತೆ ಹೇಗಿರಬೇಕು, ಎಂಬೆಲ್ಲ ಮಾಹಿತಿಯನ್ನು ವಿವಿಧ ವಿಷಯಗಳ ತಜ್ಞರು ಧ್ವನಿ, ದೃಶ್ಯ, ಪ್ರಾತ್ಯಕ್ಷಿಕೆ ಹಾಗೂ ಅಣಕು ಸಂದರ್ಶನ ನಡೆಸುವ ಮೂಲಕ ಉಚಿತವಾಗಿ ತಿಳಿಸಿಕೊಡಲಿದ್ದಾರೆ. ಕಾರ್ಯಾಗಾರದಲ್ಲಿ ಅಭ್ಯರ್ಥಿಗಳಷ್ಟೇ ಅಲ್ಲದೇ, ಅವರ ಪಾಲಕರೂ ಪಾಲ್ಗೊಳ್ಳಬಹುದು.

ದಿನ-2

ಎರಡನೇ ದಿನ, ಅಕ್ಟೋಬರ್ 29ರಂದು, ಅಭ್ಯರ್ಥಿಗಳ ಸಂದರ್ಶನ ನಡೆಯಲಿದೆ. ನಾಡಿನ ಹೆಸರಾಂತ ಕಂಪನಿಗಳ ಪ್ರತಿನಿಧಿಗಳು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ, ಅರ್ಹ ಅಭ್ಯರ್ಥಿಗಳ ಸಂದರ್ಶನ ನಡೆಸುವರು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗ ಆಹ್ವಾನಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುವುದು.

ಉದ್ಯೋಗ ಮೇಳದ ವಿಶೇಷತೆಗಳು
i) ಸಂಪೂರ್ಣ ಉಚಿತ
ii) ಮೇಳ ನಡೆಯುವ ಎರಡೂ ದಿನ ಉಚಿತ ಊಟ ಹಾಗೂ ಉಪಾಹಾರ.
iii) ಉದ್ಯೋಗ ಮೇಳ ನಡೆಯುವ ಮಿಲೇನಿಯಂ ಪಬ್ಲಿಕ್ ಸ್ಕೂಲ್ ಕ್ಯಾಂಪಸ್‍ಗೆ ಕೊಪ್ಪಳ ನಗರದಿಂದ ಉಚಿತ ಸಾರಿಗೆ ವ್ಯವಸ್ಥೆ. ಜೊತೆಗೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್‍ಗಳು ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ.
iv) ಎಸ್‍ಎಸ್‍ಎಲ್‍ಸಿಯಿಂದ ಹಿಡಿದು ಸ್ನಾತಕೋತ್ತರ ಹಾಗೂ ಅದಕ್ಕೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳವರೆಗೆ, ಎಲ್ಲರಿಗೂ ಅವಕಾಶ.
v) ಸಂದರ್ಶನ ಎದುರಿಸುವ ಕುರಿತು ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ತರಬೇತಿ. ಅಭ್ಯರ್ಥಿಗಳ ಜೊತೆಗೆ ಪಾಲಕರಿಗೂ ಪಾಲ್ಗೊಳ್ಳಲು ಅವಕಾಶ.
vi) ಕೊಪ್ಪಳ ನಗರದ ಹೊರವಲಯದಲ್ಲಿ, ಗದಗ ರಸ್ತೆಯಲ್ಲಿರುವ ಮಿಲೇನಿಯಂ ಪಬ್ಲಿಕ್ ಶಾಲೆಯ 10 ಎಕರೆ ವಿಸ್ತಾರದ ಕ್ಯಾಂಪಸ್‍ನಲ್ಲಿ ಮೇಳ ಆಯೋಜನೆ.
vii) ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿವಿಧ ಉದ್ಯೋಗವಕಾಶಗಳ ಜೊತೆಗೆ, ಸ್ಥಳೀಯ ಹಾಗೂ ನಾಡಿನ ಹೆಸರಾಂತ ವಿವಿಧ ಕಂಪನಿಗಳಲ್ಲಿ ಲಭ್ಯವಿರುವ ಉದ್ಯೋಗ ಪಡೆಯುವ ಅವಕಾಶ.
viii) ಸ್ವ ಉದ್ಯೋಗ ಕೈಗೊಳ್ಳಬೇಕೆನ್ನುವವರೂ ಪಾಲ್ಗೊಳ್ಳಬಹುದು. ಇಂತಹ ಅಭ್ಯರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳು ಹಾಗೂ ಅದಕ್ಕೆ ಬೇಕಾದ ತರಬೇತಿ ಪಡೆಯುವ ಮಾಹಿತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳಿಗೆ ನಂತರದ ದಿನಗಳಲ್ಲಿ ತರಬೇತಿ ನೀಡುವ ಯೋಜನೆಯೂ ಉಂಟು.

ಪಾಲ್ಗೊಳ್ಳಲಿರುವ ಗಣ್ಯರು
ix) ಕೇಂದ್ರ ಉದ್ಯಮಶೀಲತೆ ಹಾಗೂ ಕೌಶಲ ಅಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗ್ಡೆ ಅವರಿಂದ ಅಕ್ಟೋಬರ್ 28ರಂದು ಉದ್ಯೋಗ ಮೇಳದ ಉದ್ಘಾಟನೆ
x) ಅಕ್ಟೋಬರ್ 29ರಂದು ಎರಡನೇ ದಿನದ ಉದ್ಯೋಗ ಮೇಳಕ್ಕೆ ಕೊಪ್ಪಳ ಶ್ರೀ ಗವಿಮಠದ ಶ್ರೀಶ್ರೀಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಚಾಲನೆ.
ಶ್ರೀ ಸಂಗಣ್ಣ ಕರಡಿ, ಸಂಸದರು, ಕೊಪ್ಪಳ
xi) ಶ್ರೀ ಅಮರೇಶ ಕರಡಿ, ಯುವ ಮುಖಂಡರು, ಭಾರತೀಯ ಜನತಾ ಪಕ್ಷ, ಕೊಪ್ಪಳ
xii) ಶ್ರೀ ಗವಿಸಿದ್ದಪ್ಪ ಕರಡಿ, ಜಿಲ್ಲಾ ಪಂಚಾಯತ ಸದಸ್ಯರು, ಕೊಪ್ಪಳ
xiii) ವಿವಿಧ ಕಂಪನಿಗಳ ಗಣ್ಯ ಪ್ರತಿನಿಧಿಗಳು
xiv) ಶ್ರೀ ಗಿರೀಶ ಕಣವಿ, ಕಾರ್ಯದರ್ಶಿಗಳು, ಮಿಲೇನಿಯಂ ಪಬ್ಲಿಕ್ ಸ್ಕೂಲ್, ಕೊಪ್ಪಳ
xv) ಕೊಪ್ಪಳ ಜಿಲ್ಲೆಯ ವಿವಿಧ ಗಣ್ಯರು

Please follow and like us:
error