ಸಮೀಕ್ಷೆ ನಕಲಿ, ಧೈರ್ಯವಿದ್ದರೆ ಮೋದಿ ಸಂಸತ್ತು ವಿಸರ್ಜಿಸಿ ಚುನಾವಣೆಗೆ ತೆರಳಲಿ: ಮಾಯಾವತಿ

modi_mayavati_electionನರೇಂದ್ರ ಮೋದಿಗೆ ಆ್ಯಪ್ ಸಮೀಕ್ಷೆ ಯಲ್ಲಿ ಭಾಗವಹಿಸಿದ ಶೇ.93 ರಷ್ಟು ಮಂದಿ ನೋಟು ಅಮಾನ್ಯಗೊಳಿಸಿರುವುದನ್ನು ಬೆಂಬಲಿಸಿದ್ದಾರೆ. ಈ ಸಮೀಕ್ಷೆಯನ್ನು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅಪ್ಪಟ ನಕಲಿ, ಅಕ್ರಮ ಎಂದು ಟೀಕಿಸಿದ್ದಾರೆ ಎಂದು ವರದಿಯಾಗಿದೆ. ಇದು ಸುಳ್ಳು ಮತ್ತು ಪೂರ್ವನಿಶ್ಚಿತವಾದುದು ಒಂದುವೇಳೆ ಮೋದಿಗೆ ಧೈರ್ಯವಿದ್ದರೆ ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲಿ. ಆಗ ನೈಜ ಸಮೀಕ್ಷೆ ಬಯಲಾಗುತ್ತದೆ ಎಂದು ಮಾಯಾವತಿ ಸವಾಲು ಹಾಕಿದ್ದಾರೆ. “ಮೋದಿ ಹೌಸ್‌ಗೆ(ಸಂಸತ್ತಿಗೆ) ಬರಬೇಕು. ಚರ್ಚೆಯಲ್ಲಿ ಭಾಗವಹಿಸಬೇಕು. ಅವರು ಯಾಕೆ ಓಡುತ್ತಿದ್ದಾರೆ” ಎಂದು ಅವರು ಪ್ರಶ್ನಿಸಿದ್ದಾರೆ.

ನವೆಂಬರ್ 22ರಿಂದು ಬೆಳಗ್ಗೆ ಹತ್ತು ಗಂಟೆಯಿಂದ ಆರಂಭಿಸಿ ಮೂವತ್ತು ಗಂಟೆಗಳ ಸಮೀಕ್ಷೆಯಲ್ಲಿ ಐದು ಲಕ್ಷ ಮಂದಿ ಭಾಗವಹಿಸಿದ್ದು. ಈ ಸಮೀಕ್ಷೆಯಲ್ಲಿ ಶೇ.90ರಷ್ಟು ಜನರು ಕಪ್ಪು ಹಣ ತಡೆಗೆ ಮೋದಿ ಸರಕಾರ ಮುಂದಿಟ್ಟ ಹೆಜ್ಜೆ ಅತ್ಯುತ್ತಮವಾಗಿದೆ ಹೇಳಿದ್ದಾರೆ ಎನ್ನಲಾಗಿದೆ. ಪ್ರಧಾನಿ ಈ ಸಮೀಕ್ಷೆ ಫಲಿತಾಂಶದಿಂದ ಪ್ರೇರಿತರಾಗಿ ಜನರಿಗೆ ಧನ್ಯವಾದ ಕೂಡಾ ಹೇಳಿದ್ದರು. ಆದರೆ ಮಾಯವತಿ ಈ ಸಮೀಕ್ಷೆ ಸುಳ್ಳು ಎಂದು ಪ್ರಧಾನಿಗೆ ಸವಾಲೆಸೆದಿದ್ದಾರೆಂದು ವರದಿ ತಿಳಿಸಿದೆ.

varthabharati

Leave a Reply