ಶ್ರೀಸಾಮಾನ್ಯನನ್ನು ವರಿಸಲು ಅರಸೊತ್ತಿಗೆ ತ್ಯಜಿಸಲಿರುವ ಜಪಾನ್ ರಾಜಕುಮಾರಿ

ಟೋಕಿಯೊ, japan-princess: ಜಪಾನ್‌ನ ರಾಜಕುಟುಂಬದ ರಾಜಕುಮಾರಿ ಮಾಕೊ ಶ್ರೀಸಾಮಾನ್ಯನೊಬ್ಬನನ್ನು ವಿವಾಹವಾಗಲಿರುವುದರಿಂದ ಆಕೆ ತನ್ನ ಅರಸೊತ್ತಿಗೆಯ ಸ್ಥಾನಮಾನವನ್ನು ತ್ಯಜಿಸಬೇಕಾಗಿದೆ.

ಜಪಾನ್ ಚಕ್ರವರ್ತಿ ಅಕಿಹಿಟೋ ಅವರ ಹಿರಿಯ ಮೊಮ್ಮಗಳಾದ ಮಾಕೊ ಅವರು 25 ವರ್ಷ ವಯಸ್ಸಿನ ಕಿ ಕೊಮುರೊ ಅವರನ್ನು ವಿವಾಹವಾಗಲಿದ್ದಾರೆ. ಇಬ್ಬರೂಸ ಟೋಕಿಯೊದ ಅಂತರಾಷ್ಟ್ರೀಯ ಕ್ರೈಸ್ತ ವಿವಿಯಲ್ಲಿ ಕಾನೂನು ವಿದ್ಯಾರ್ಥಿಗಳಾಗಿ ಅಧ್ಯಯನ ನಡೆಸುತ್ತಿದ್ದಾಗ ಉಂಟಾಗಿದ್ದ ಪರಿಚಯವು ಆನಂತರ ಪ್ರೇಮಕ್ಕೆ ತಿರುಗಿತ್ತು. ಜಪಾನ್‌ನ ರಾಜಸತ್ತೆಯ ಕಾನೂನಿನ ಪ್ರಕಾರ ರಾಜಕುಮಾರಿಯೊಬ್ಬಳು ಶ್ರೀಸಾಮಾನ್ಯನನ್ನು ವಿವಾಹವಾದಲ್ಲಿ ಆಕೆ ತನ್ನ ರಾಜಕುಟುಂಬವನ್ನು ತ್ಯಜಿಸಬೇಕಾಗುತ್ತದೆ.

ಕಿ ಕೊಮೊರೊ ಜೊತೆ ರಾಜಕುಮಾರಿ ಮಾಕೊ ಅವರ ವಿವಾಹವು, ಜಪಾನ್‌ನ ಅ ಅರಸೊತ್ತಿಗೆ ಪರಂಪರೆಯನ್ನು ಮುಂದುವರಿಸುವ ಕುರಿತು ಹೊಸ ಚರ್ಚೆಯನ್ನು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮಾಕೊ ಅವರ ವಿವಾಹದ ನಿಶ್ಚಿತಾರ್ಥ ಶೀಘ್ರವೇ ನೆರವೇರಲಿದೆಯೆಂದು ಜಪಾನಿ ಮಾಧ್ಯಮಗಳು ವರದಿ ಮಾಡಿವೆ.

Leave a Reply