ವಾಲ್ಮಿಕಿಯಾಗುವುದು ಎಂದರೆ ಶಿಕ್ಷಣವಂತ, ಪ್ರಜ್ಞಾವಂತರಾಗುವುದು

ವಾಲ್ಮೀಕಿ ಅಕ್ಷರವಂಚಿತ ಜಗತ್ತಿನಿಂದ ಅಕ್ಷರದ

ಜಗತ್ತಿಗೆ ಪ್ರವೇಶ ಪಡೆದ ಮೊದಲಿಗ . ವಾಲ್ಮಿಕಿ ಯಾಗುವುದು ಎಂದರೆ ಶಿಕ್ಷಣವಂತರಾಗುವುದು, ಪ್ರಜ್ಞಾವಂತರಾಗುವುದು. ಸಮುದಾಯದ ಯುವಕರನ್ನುಹಿಂದೂತ್ವದ ಕಾಲಾಳುಗಳಾಗಿ ಬಳಸಲಾಗುತ್ತಿದೆ.. ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಂದ ಹೊರಬರಬೇಕು. ಸಂವಿಧಾನಾತ್ಮಕವಾದ ಹಕ್ಕುಗಳನ್ನು ಮೀಸಲಾತಿಯನ್ನು ಪಡೆಯಬೇಕಿದೆ. ಅದಕ್ಕಾಗಿ ಹೋರಾಟ ಮಾಡಬೇಕಿದೆ‌ ಎಂದು ಸಂಶೋಧಕ ಅರುಣಜೋಳದ ಕೂಡ್ಲಿಗಿ ಹೇಳಿದರು. ಕೊಪ್ಪಳದ ಸಾಹಿತ್ಯಭವನದಲ್ಲಿ ನಡರದ ವಾಲ್ಮಿಕಿ ಜಯಂತಿಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅರುಣ್ ಜೋಳದ ಕೂಡ್ಲಿಗಿ ಸಮುದಾಯದ ಸಮಸ್ಯೆಗಳ ಕುರಿತು ಮಾತನಾಡಿದರು.

Please follow and like us:
error