ಮುಂಬೈನಲ್ಲಿ ಐಟಿ ದಾಳಿ : ಬಿಜೆಪಿ – ಶಿವಸೇನೆ ವಿವಾದದ , ಬಿಎಂಸಿ ಗುತ್ತಿಗೆದಾರರ ಮೇಲೆ ಐಟಿ ದಾಳಿ

ಮುಂಬೈ . ನ . 14 : ಬೃಹನ್ಮುಂಬೈ ಮಹಾನಗರ ಪಾಲಿಕೆ ( ಬಿಎಂಸಿ ) ಯ ಸಿವಿಲ್ ಗುತ್ತಿಗೆದಾರರ ವಿರುದ್ಧ ಆದಾಯ ತೆರಿಗೆ ಅಧಿಕಾರಿಗಳು ಸರಣಿ ದಾಳಿಗಳನ್ನು ನಡೆಸಿದ್ದು , ಒಟ್ಟು 735 ಕೋ . ರೂ . ಗಳ ಅವ್ಯವಹಾರಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ . ನ . 6ರಂದು ಒಟ್ಟು 30 ಕಡೆಗಳಲ್ಲಿ ದಾಳಿಗಳನ್ನು ನಡೆಸಲಾಗಿದ್ದು , ಇತರ ಏಳು ಗುತ್ತಿಗೆದಾರರ ವ್ಯವಹಾರಗಳನ್ನು ಪರಿಶೀಲಿಸಲಾಗಿದೆ . ಕೆಲವು ಗುತ್ತಿಗೆದಾರರು ಆದಾಯ ತೆರಿಗೆಯನ್ನು ವಂಚಿಸಲು 
ಲೆಕ್ಕಪತ್ರಗಳಲ್ಲಿ ಗೋಲ್‌ಮಾಲ್ ನಡೆಸಿರುವ ಬಗ್ಗೆ ವರದಿಗಳಿದ್ದವು ಎಂದು ಅಧಿಕಾರಿಯೋರ್ವರು ತಿಳಿಸಿದರು . ದಾಳಿಗಳ ಸಂದರ್ಭ ಭಾರೀ ಪ್ರಮಾಣದ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವಹಿವಾಟನ್ನು ತೋರಿಸುವ ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿವೆ . ಹೆಚ್ಚಿನ ಅವ್ಯವಹಾರಗಳನ್ನು ಮುಖವಾಡ ಕಂಪನಿಗಳ ಮೂಲಕ ನಡೆಸಲಾಗಿತ್ತು ಎಂದರು . ರಾಜ್ಯದಲ್ಲಿ ರಾಜಕೀಯ ಪ್ರಕ್ಷುಬ್ದತೆಯ ನಡುವೆಯೇ ಈ ದಾಳಿಗಳು ನಡೆದಿವೆ . ಬಿಎಂಸಿ ಆಡಳಿತವು ಬಿಜೆಪಿಯೊಂದಿಗೆ ಮೈತ್ರಿಯನ್ನು ಕಡಿದುಕೊಂಡಿರುವ ಶಿವಸೇನೆಯ ನಿಯಂತ್ರಣದಲ್ಲಿದೆ .

Please follow and like us:
error