ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಕರಡಿ ಸಂಗಣ್ಣ

ಕೊಪ್ಪಳ :

ಕೊಪ್ಪಳದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು ಇಂದು ಕೊಪ್ಪಳದಲ್ಲಿ ಬಿಜೆಪಿ ಲೋಕಸಭೆ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಒಂದು‌ ಸುತ್ತು ನಾಮಪತ್ರ ಸಲ್ಲಿಸಿದ ಕರಡಿ ಸಂಗಣ್ಣ ಮತ್ತೊಮ್ಮೆ ಅಪಾರ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿರಿಯ ಬಿಜೆಪಿ ಮುಖಂಡರೊಂದಿಗೆ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಬಿರು ಬಿಸಿಲಿನಲ್ಲಿಯೂ ಸಾವಿರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಾಮ ಪತ್ರಸಲ್ಲಿಕೆಗೆ ಮಾಜಿ ಸಚಿವ ಲಕ್ಷ್ಮಣ ಸವದಿ, ಹಾಗೂ ಶಾಸಕ‌ ಶ್ರೀರಾಮುಲು, ಮುರುಗೇಶ್ ನಿರಾಣಿ, ಹಾಲಪ್ಪ ಆಚಾರ್, ಬಸವರಾಜ್ ದಡೆಸೂಗೂರು, ಪರಣ್ಣ ಮುನವಳ್ಳಿ , ಸಿ.ವಿ.ಚಂದ್ರಶೇಖರ ಸೇರಿದಂತೆ ಇನ್ನಿತರ ಮುಖಂಡರು ಸಾಥ್ ನೀಡಿದರು.

ನಗರದ ಗಮಿಮಠದಿಂದ, ಗಡಿಯಾರ ಕಂಬದ ಮಾರ್ಗವಾಗಿ ಜಿಲ್ಲಾ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಕಾರ್ಯಕರ್ತರು ಬೆಂಬಲಿಗರು ಭಾಗಿಯಾಗಿ ಮೋದಿ ಮುಖವಾಡ ಧರಿಸಿ ಕುಣಿದು ಸಂಭ್ರಮಿಸಿದರು.ಮೆರಣಿಗೆಯ ಮೂಲಕ ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಸಂಸದ ಕರಡಿ ಸಂಗಣ್ಣ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

Please follow and like us:
error