You are here
Home > ಗ್ಯಾಲರಿ > ಅಭಿಮಾನಿ ಹಾಗೂ ಮೈಸೂರು ದಿಗಂತ ಪ್ರಶಸ್ತಿಗಾಗಿ ಪತ್ರಕರ್ತರಿಂದ ಅರ್ಜಿ ಆಹ್ವಾನ

ಅಭಿಮಾನಿ ಹಾಗೂ ಮೈಸೂರು ದಿಗಂತ ಪ್ರಶಸ್ತಿಗಾಗಿ ಪತ್ರಕರ್ತರಿಂದ ಅರ್ಜಿ ಆಹ್ವಾನ

: journalist_awardಕರ್ನಾಟಕ ಮಾದ್ಯಮ ಅಕಾಡೆಮಿಯಲ್ಲಿ ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆ ಮತ್ತು ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಗಳು ದತ್ತಿಯಾಗಿ ಸ್ಥಾಪಿಸಿರುವ ವಾರ್ಷಿಕ ಪ್ರಶಸ್ತಿಗಾಗಿ ನೀಡುವ ಅಭಿಮಾನಿ ಪ್ರಶಸ್ತಿ ಮತ್ತು ಮೈಸೂರು ದಿಗಂತ ಪ್ರಶಸ್ತಿಗಾಗಿ ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಸಮಸ್ಯೆ ಕುರಿತ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆ ಕುರಿತು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿ ಬರೆದ ಪತ್ರಕರ್ತರಿಗೆ ಹಾಗೂ ಮೈಸೂರು ದಿಂಗತ ಪತ್ರಿಕಾ ಸಂಸ್ಥೆ ಮಾನವೀಯ ಸಮಸ್ಯೆ ಕುರಿತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿ ಬರೆದ ಪತ್ರಕರ್ತರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ತಲಾ ಹತ್ತು ಸಾವಿರ ರೂ ನಗದು ಹಾಗೂ ಪ್ರಶಸ್ತಿ ನೀಡಲು ತಲಾ ಸಂಸ್ಥೆಗಳು ೧ ಲಕ್ಷ ರೂ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿದೆ.
ಅರ್ಜಿ ಸಲ್ಲಿಸುವವರು ೨೦೧೬ ರ ಜನವರಿ ಪ್ರಾರಂಭದಿಂದ ನವಂಬರ್ ಅಂತ್ಯದವರೆಗೆ ಪ್ರಕಟವಾದ ಸಾಮಾಜಿಕ ಸಮಸ್ಯೆ ಪ್ರತಿಬಿಂಬಿಸುವ ಲೇಖನ-ವರದಿ ಅಭಿಮಾನಿ ಪ್ರಶಸ್ತಿ-೨೦೧೬ ಎಂದು ದಾಖಲಿಸಿ, ಹಾಗೂ ಇದೇ ಅವಧಿಯ ಮಾನವೀಯ ಸಮಸ್ಯೆ ಕುರಿತ ಪ್ರತಿಬಿಂಬಿಸುವ ಒಂದು ಲೇಖನ-ವರದಿ ಮೈಸೂರು ದಿಗಂತ ಪ್ರಶಸ್ತಿ-೨೦೧೬ ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ/ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಲಗತ್ತಿಸಿ ಕಳುಹಿಸಬಹುದು.
ಲೇಖನ ವರದಿಯನ್ನು ಡಿಸೆಂಬರ್ ೨೬ ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಭಿಮಾನಿ ಪ್ರಶಸ್ತಿ-೨೦೧೬ ಹಾಗೂ ಮೈಸೂರು ದಿಗಂತ ಪ್ರಶಸ್ತಿ-೨೦೧೬ ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ ಡಾ. ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-೫೬೦೦೦೧ ಇಲ್ಲಿಗೆ ಕಳುಹಿಸಬಹುದು ಎಂದು ಅಕಾಡೆಮಿಯ ಅಧ್ಯಕ್ಷ ಎಂ.ಸಿದ್ದರಾಜು ತಿಳಿಸಿದ್ದಾರೆ.

Leave a Reply

Top