9ನೇ ಆವೃತ್ತಿಯ ಐಪಿಎಲ್‍ಗೆ ಇಂದು ಚಾಲನೆ..

ipl-india
ಏಪ್ರಿಲ್‌ 9ರಂದು ಆರಂಭವಾಗಲಿರುವ 9ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಸಮಾರಂಭ ಏಪ್ರಿಲ್‌ 8ರಂದು ಮುಂಬೈನಲ್ಲಿ ಆಯೋಜನೆಗೊಂಡಿದೆ. ಮನಮೋಹಕ ಸಮಾರಂಭದಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌, ಯೊ ಯೊ ಹನಿ ಸಿಂಗ್‌, ಕತ್ರಿನಾ ಕೈಫ್‌, ರಣವೀರ್‌ ಸಿಂಗ್‌ ಉಪಸ್ಥಿತಿ ಇನ್ನಷ್ಟು ಮೆರುಗು ನೀಡಲಿದೆ. ಭಾರತದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ನೀಡುತ್ತಿರುವ ಪ್ರಸಿದ್ಧ ಬ್ಯಾಂಡ್ ‘ಟಿಬಿಸಿ’ ಈ ಬಾರಿಯ ಐಪಿಎಲ್‌ ಉದ್ಘಾಟನಾ ಸಮಾರಂಭದ ಕೇಂದ್ರಬಿಂದು ಎನಿಸಲಿದೆ. ‘ಭಾರತದಲ್ಲಿ ಮೊದಲ ಬಾರಿಗೆ 360 ಡಿಗ್ರಿ ಅನುಭವ ನೀಡುವ ತಡೆರಹಿತ ಗ್ರಾಫಿಕ್ಸ್‌ ಹಾಗೂ ಪ್ರೊಜೆಕ್ಷನ್‌ ವ್ಯವಸ್ಥೆಯನ್ನು ಈ ಬಾರಿಯ ಐಪಿಎಲ್‌ ವೇದಿಕೆಯಲ್ಲಿ ನೋಡಬಹುದು.

Please follow and like us:
error