ರೋವರ ಮತ್ತು ರೇಂಜರಗಳ ಪ್ರಕೃತಿ ಮತ್ತು ಚಾರಣ ಅದ್ಯಯನ ಶಿಬಿರ

ಕೊಪ್ಪಳ : ಇತ್ತೀಚಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಕಲಬುರ್ಗಿ ವಿಭಾಗ ಮಟ್ಟದ ರೋವರ್ ಮತ್ತು ರೇಂಜರ್ ಪ್ರಕೃತಿ ಅಧ್ಯಾಯನ ಮತ್ತು ಚಾರಣ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಸಕ ಕೆ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಸ್ಕೌಟ್ ಮತ್ತು ಗೈಡ್ಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್.ಸಿಂದ್ಯಾರವರು ಶಿಬಿರದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರರಾದ ಗುರುಬಸವರಾಜ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಉಪನಿರ್ದೇಶಕ ಹೆಚ್.ಹೆಚ್.ಗೋನಾಳ, ಸ್ಕೌಟ್ ಮತ್ತು ಗೈಡ್ಸ್‍ನ ಜಿಲ್ಲಾ ಆಯುಕ್ತಕ ಮಲ್ಲಿಕಾರ್ಜುನ ಚೌಕಿಮಠ, ಜಿಲ್ಲಾ ಸಂಘಟನೆಕಾರರಾದ ಮಲ್ಲೇಶ್ವರಿ ಪೂಜಾರ, ಕಾರ್ಯದರ್ಶಿ ಸುದರ್ಶನ, ಜಿ.ಉಪಾಧ್ಯಕ್ಷೆ ಶೈಲಜಾ ಬಾಗಲಿ, ಅರುಣ ವಸ್ತ್ರದ, ಶರಣಬಸನಗೌಡ, ದೇವೇಂದ್ರಪ್ಪ, ಭೀರಪ್ಪ ಇತರರು ಉಪಸ್ಥಿತರಿದ್ದರು.
ಶ್ರೀಕಾಂತ ಮಾಸಗಟ್ಟಿ ನಿರೂಪಿಸಿದರು, ವಿಜಯ ಜಾಲಿಹಳ್ಳಿ ಹಾಗೂ ಜಿಲ್ಲಾ ಸಂಘಟಕರಾದ ಶ್ರೀಮತಿ ಮಲ್ಲೇಶ್ವರಿ ಪೂಜಾರ ವಂದಿಸಿದರು.

Please follow and like us:
error