ಉಚಿತ ಬ್ಯಾಡ್ಮಿಂಟನ್ ಕೋಚಿಂಗ್ ಕ್ಯಾಂಪ್


ಕೊಪ್ಪಳ : ಮಾ.೨೦, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಬ್ಯಾಡ್ ಮಿಂಟನ್ ಅಸೋಷಿಯೇಶನ್ ಹಾಗೂ ಕೊಪ್ಪಳ ಜಿಲ್ಲಾ ಬ್ಯಾಡ್ ಮಿಂಟನ ಅಸೋಷಿಯೇಶನ್, ಯುವಜನ ಸೇವಾ ಕ್ರೀಡಾ ಇಲಾಖೆ ಇವರುಗಳ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಪ್ರೀಲ್ ೦೧ ರಿಂದ ಎಪ್ರೀಲ್ ೨೧ ರ ವರಗೆ ಉಚಿತ ಬ್ಯಾಡ್ ಮಿಂಟನ್ ಕೋಚಿಂಗ್ ಕ್ಯಾಂಪನ್ನು ಹಮ್ಮಿಕೊಳ್ಳಲಾಗಿದೆ.
ಈ ಕೊಚಿಂಗ್‌ನಲ್ಲಿ ೧೦ ರಿಂದ ೧೬ ವರ್ಷದ ಪುರುಷ ಹಾಗೂ ಮಹಿಳೆಯರು ಭಾಗವಹಿಸಬಹುದು. ವಿಶೇಷ ಸೂಚನೆ ಎಲ್ಲಾ ಬ್ಯಾಡ್ ಮಿಂಟನ್ ಆಟಗಾರರಿಗೆ ಬ್ಯಾಡ್ ಮಿಂಟನ್ ಅಸೋಷಿಯೇಶನ್ ಆಫ್ ಇಂಡಿಯಾ ಐಡಿ ಕಾರ್ಡ ಮಾಡಿಕೊಡಲಾಗುವುದು.
ಎಲ್ಲಾ ತಾಲೂಕ ಬ್ಯಾಡ್ ಮಿಂಟನ್ ಅಸೋಶಿಯೇಷನ್ನು ಕೊಪ್ಪಳ ಜಿಲ್ಲಾ ಬ್ಯಾಡ್ ಮಿಂಟನ್ ಅಸೋಶಿಯೇಷನಗೆ ಸೇರಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೋ : ೯೯೪೫೮೦೦೯೦೯, ೯೭೪೦೪೦೭೮೧೭, ೮೨೧೭೨೫೩೨೨೩ ಸಂಪರ್ಕಿಸಲು ಕೊರಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಮುಸ್ತಫ ಕುದರಿಮೋತಿ   ತಿಳಿಸಿದ್ದಾರೆ.

Please follow and like us:
error