2018 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಎನ್ ರವಿಕುಮಾರ್ ಗೆ

ಧಾರವಾಡ : 2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಶಿವಮೊಗ್ಗದ ಎನ್ ರವಿಕುಮಾರ್ (ಟೆಲೆಕ್ಸ್ ರವಿ) ಕೃತಿ ರವಿಕುಮಾರ ಕವನಗಳು ಇದಕ್ಕೆ ದೊರೆತಿದೆ. . ಕೆ ವೈ ನಾರಾಯಣಸ್ವಾಮಿ ಮತ್ತು ಸಬೀತಾ ಬನ್ನಾಡಿ ಅವರು ನಿರ್ಣಾಯಕರಾಗಿದ್ದರು. ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಅಂತಿಮ ಹಂತಕ್ಕೆ ಹತ್ತು ಜನ ಕವಿಗಳ ಹಸ್ತಪ್ರತಿ ಆಯ್ಕೆ ಆಗಿದ್ದವು. ಈ ಹಂತದಲ್ಲಿ ಬಸವರಾಜ ಹೂಗಾರ, ರೇಣುಕಾ ರಮಾನಂದ, ಕೆ. ಎಂ. ವೀರಲಿಂಗನಗೌಡ, ಸುನಂದಾ ಕಡಮೆ ಮತ್ತು ನಾನು ಪಾಲ್ಗೊಂಡು ಈ ಅಯ್ಕೆಯನ್ನು ಮಾಡಲಾಗಿತ್ತು. ಅಂತಿಮ ಹಂತಕ್ಕೆ ಆಯ್ಕೆ ಆದವರು

1. ಆಕರ್ಷ ಕಮಲ – ಕವಿತೆಯಾಗದ ಮಳೆ

2. ಎನ್. ರವಿಕುಮಾರ್- ರವಿಕುಮಾರ್ ಕವಿತೆಗಳು

3. ಶಿ.ಜು ಪಾಶ- ಕದದ ಕಣ್ಣು

4. ಆನಂದ ಋಗ್ವೇದಿ – ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು

5. ಕೆ.ಪಿ ನಟರಾಜ – ಮೃತ್ತಿಕೆಯ ಕಣ್ಣುಗಳು

6. ಲಕ್ಷ್ಮಣ ವಿ.ಎ – ಲಕ್ಷ್ಮಣ ಕವಿತೆಗಳು

7. ಸಚಿನ ಅಂಕೋಲಾ – ಗುಬ್ಬಚ್ಚಿ ಕನಸು

8. ಸ್ಮಿತಾ ಅಮೃತರಾಜ ಸಂಪಾಜೆ – ಮಾತು ಮೀಟಿ ಹೋಗುವ ಹೊತ್ತು

9. ದುಡ್ಡನಹಳ್ಳಿ ಮಂಜುನಾಥ – ಹಿಂದಿನ ಮೆನುವಿಗೆ ನಾಲ್ಕನ್ನು ಒತ್ತಿ

10. ಚ. ಲಿಂಗರಾಜ ಸೊಟ್ಟಪ್ಪನವರ – ಕ್ಯಾಕ್ಟಸ್ ಮತ್ತೆ ಅದರ ರುಚಿ

ವಿಭಾ ಸಾಹಿತ್ಯ ಪ್ರಶಸ್ತಿಯ ಸಂಚಾಲಕರಾಗಿ ಪ್ರತಿ ವರ್ಷವೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಯಶಸ್ವಿಗೆ ಕಾರಣರಾಗುತ್ತಿರುವವರು ಪ್ರಕಾಶ ಮತ್ತು ಸುನಂದಾ ಕಡಮೆ .ಈ ಎಲ್ಲ ಕೆಲಸ ಕಾರ್ಯಗಳಿಗೆ ಸಹಕರಿಸಿದ ಮನಸುಗಳಿಗೆ ನಮನಗಳು, ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಬಸವರಾಜ ಸೂಳಿಬಾವಿ ಸಲ್ಲಿಸಿದ್ದಾರೆ.

Please follow and like us:
error