ಸೌಹಾರ್ದ ವಾತಾವರಣ ರಾಜಕೀಯ ಹಿಂಸೆಯಿಂದಾಗಿ ಕಲುಷಿತಗೊಂಡಿದೆ : ಕೆ ಷರೀಫಾ

ಹೊಸಪೇಟೆ  : 

ರಾಜಕೀಯ ಹಿಂಸೆಯಿಂದಾಗಿ ಇಂದು ನಮ್ಮ ಸಮಾಜದ ಸೌಹಾರ್ದ ವವಾತಾವರಣವು ಹಾಳಾಗುತ್ತಿದೆ ಎಂದು ಸಾಹಿತಿ ಕೆ ಷರೀಫಾ ಅಭಿಪ್ರಾಯಪಟ್ಟರು.

ಅವರು ಹೊಸಪೇಟೆಯ ಭಾವೈಕ್ಯತಾ ವೇದಿಕೆಯ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ದಿ. ಹೊನ್ನೂರಸಾಬ್ ಸ್ಮರಣಾರ್ಥ ನಗರಸಭೆ ಸದಸ್ಯೆ, ಕತೆಗಾರ್ತಿ ನೂರಜಾನ್ ರವರು ರಚಿಸಿರುವ *ಮುಂತಾಜ್ ಮತ್ತು ಇತರ ಕತೆಗಳು* ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚೆಗೆ ಸಾಕಷ್ಟು ಜನ ಲೇಖಕಿಯರು ಅದ್ಭುತವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದು, ಅಪರೂಪದ ಸಾಹಿತ್ಯ ಹೊರ ಬರುತ್ತಿದೆ. ಅಂತೆಯೇ ನೂರಜಾನ್ ಅವರು ತಮ್ಮ ಬದುಕಿನಲ್ಲಿ ಮತ್ತು ಸಮಾಜದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಉತ್ತಮ ಕತೆಗಳನ್ನು ರಚಿಸಿದ್ದಾರೆ ಎಂದರು. ಸಮಾಜದಲ್ಲಿ ಅತ್ಯಂತ ನೀಚ ಜನರು ಇಂದು ವಾತಾವರಣ ಹಾಳು ಮಾಡುತ್ತಿದ್ದು, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಗುರ್ಮೀತ್ ಸಿಂಗ್ ಪ್ರಕರಣವನ್ನು ಉಲ್ಲೇಖಿಸಿದರು. ಇದಕ್ಕೂ ಮುನ್ನ ಮಾತನಾಡಿದ ಮ ಬ ಸೋಮಣ್ಣ “ರಂಗ ಕಲಾವಿದರಿಗೆ ನಗರದಲ್ಲಿ ಸಮರ್ಪಕ ಕಲಾಮಂದಿರದ ಅಗತ್ಯ ಇದ್ದು, ತಾಲೂಕು ಆಡಳಿತ ಈ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.” 

ಕವಯತ್ರಿ ಡಾ.ಮುಮ್ತಾಜ್ ಬೇಗಂ ಬಿರಾದಾರ ಅವರು ಕಥಾ ಸಂಕಲನದ ಕುರಿತು ಮಾತನಾಡಿದರು. ಕೆ ನಾಗರತ್ನಮ್ಮ ಕಾರ್ಯಕ್ರಮ ಉದ್ಘಾಟಿಸಿದರು, ಡಾ.ಸುಲೋಚನಾ ಅವರು ಅಧ್ಯಕ್ಷತೆ ವಹಿಸಿದ್ದರು.ಸರ್ಕಲ್ ಇನ್ಸಪೆಕ್ಟರ್ ಲಿಂಗನಗೌಡ್ರು, ನಗರಸಭೆ ಸದಸ್ಯ ಚಿದಾನಂದಪ್ಪ, ಕತೆಗಾರ್ತಿ ನೂರಜಾನ್, ಪಿ ಅಬ್ದುಲ್ಲಾ, ಅಬ್ದುಲ್ ಹೈ ತೋ ಹಾಜರಿದ್ದರು.ಕಥಾಸಂಕಲನ ಬಿಡುಗಡೆ ನಂತರ ಕವಿಗೋಷ್ಠಿ ನಡೆಯಿತು. ಕೆ ಷರೀಫಾಬಿ ಅಧ್ಯಕ್ಷತೆ ವಹಿಸಿದ್ದರು.

Please follow and like us:
error