ಡಾ.ಸಿದ್ಧಲಿಂಗಪ್ಪ ಕೊಟ್ಟೆಕಲ್‌ ರ ಎರಡು ಕೃತಿಗಳ ಬಿಡುಗಡೆ

ಕೊಪ್ಪಳ : ಮೇಘನಾ ಪ್ರಕಾಶನ , ಕೊಪ್ಪಳ , ಶ್ರೀ ಸಿ.ವಿ ಚಂದ್ರಶೇಖರ ಅಭಿಮಾನಿ ಬಳಗ , ಕೊಪ್ಪಳ , ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸಾಹಿತಿಗಳಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ರವರ ಪಿಎಚ್.ಡಿ ಸಂಶೋಧನಾ ಪರಿಷ್ಕೃತ ದ್ವಿತೀಯ ಮುದ್ರಣ ಕೃತಿ ‘ ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ ಹಾಗೂ ಕುಟುಂಬದಲ್ಲಿ ನಡೆದ ಹಾಸ್ಯ ಪ್ರಸಂಗಗಳ ಪರಿಷ್ಕೃತ ತೃತೀಯ ಮುದ್ರಣ ‘ ಸಂಸಾರ ಸಗ್ಗ ‘ ಕೃತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ . ಸತೀಶಕುಮಾರ ಎಸ್ ಹೊಸಮನಿಯವರು ಲೋಕಾರ್ಪಣೆ ಮಾಡಲಿದ್ದಾರೆ . ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ , ಅಲ್ಲಮಪ್ರಭು ಬೆಟ್ಟದೂರವರು ಉದ್ಘಾಟಿಸಲಿದ್ದಾರೆ . ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವಿಠ್ಯಪ್ಪ ಗೋರಂಟ್ಲಿಯವರು ವಹಿಸಿಕೊಳ್ಳಲಿದ್ದಾರೆ . ಎರಡೂ ಕೃತಿಗಳ ದಾನಿಗಳಾದ ರಾಜಕೀಯ ಧುರೀಣರು ಸಿ.ವಿ ಚಂದ್ರಶೇಖರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಹಿರಿಯ ಸಾಹಿತಿ ಎಚ್.ಎಸ್ ಪಟೇಲ್‌ರವರು ಕೃತಿಗಳ ಕುರಿತು ಮಾತನಾಡಲಿದ್ದಾರೆ . ಅಧ್ಯಾಪಕರಾದ ಪ್ರೊ.ಶರಣಬಸಪ್ಪ ಬಿಳಿಎಲಿಯವರು ಅಭಿನಂದನಾ ಭಾಷಣ ಮಾಡಲಿದ್ದಾರೆ . ಜಿಲ್ಲಾ ಮುಖ್ಯ ಗ್ರಂಥಪಾಲಕರಾದ ಎಂ.ಎಸ್ ರೆಬಿನಾಳ , ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ ಪೂಜಾರ , ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸೋಮನಗೌಡ ಪಾಟೀಲ , ಪಾಚಾರ್ಯರ ಸಂಘದ ಅಧ್ಯಕ್ಷರಾದ ಡಾ . ಎಚ್.ಜಿ ನೀರಗೇರಿ , ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಪತ್ರೆಪ್ಪ ಚತ್ತರಕಿ , ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಆರ್ . ಜುಮ್ಮನ್ನನವರ , ಡಾ.ಮಹಾಂತೇಶ ಮಲ್ಲನಗೌಡರ , ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ರಾಜಶೇಖರ ಅಂಗಡಿ , ಜಿಲ್ಲಾ ಶ.ಸಾ.ಪ ಅಧ್ಯಕ್ಷರಾದ ಜಿ.ಎಸ್ ಗೋನಾಳ , ಮಾಸ್ಟಿಯ ಎಚ್.ಶರ್ಫುದ್ದೀನ್ ಪೋತ್ನಾಳ , ಪಾಯಸ ಪರಮೇಶರವರು ಭಾಗವಹಿಸಲಿದ್ದಾರೆ ಸಾಹಿತ್ಯಾಭಿಮಾನಿಗಳು ಭಾಗವಹಿಸಲು ಪ್ರಕಾಶಕರಾದ ಶ್ರೀಮತಿ ಕೊಟ್ನೆಕಲ್ ರು ಕೋರಿದ್ದಾರೆ

Please follow and like us:
error