ಕವಿ ಎಸ್.ಕಾಸಿಂಸಾಬ, ತಿಮ್ಮನಗೌಡ್ರ ನಿಧನ

ಕೊಪ್ಪಳ : ಕೊಪ್ಪಳದ ಸಾಂಸ್ಕೃತಿಕ ಲೋಕಕ್ಕೆ ಇಂದು ಶಾಕ್ ಕವಿ ಎಸ್.ಕಾಸಿಂಸಾಬ ಹಾಗೂ ವಿಮರ್ಶಕ ತಿಮ್ಮನಗೌಡ್ರ ಇಂದು ನಿಧನರಾಗಿದ್ದಾರೆ.

ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಎಸ್.ಕಾಸಿಂಸಾಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪಿದ್ದಾರೆ. ಚುಟುಕು, ಹೇಳಲಾರೆ, ಹೇಳದಿರಲಾರೆ ಎನ್ನುವ ಕವನ ಸಂಕಲನ ಪ್ರಕಟಿಸಿದ್ದ ಕಾಸಿಂಸಾಬ ವಿದ್ಯಾರ್ಥಿ ಬಳಗದಲ್ಲಿ ಅಚ್ಚುಮೆಚ್ಚಿನವರಾಗಿದ್ದರು. ಇತ್ತೀಚಿಗೆ ಸತತವಾಗಿ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಎಸ್ ಡಿ ಎ ಯಾಗಿ, ಲೆಕ್ಕಿಗರಾಗಿ, ಸಹಾಯಕ ಕಾರ್ಯದರ್ಶಿ, ಪ್ರಭಾರ ಕಾರ್ಯದರ್ಶಿ ಆಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದ ಅತ್ಯುತ್ತಮ ಓದುಗ, ವಿಮರ್ಶಕ ತಿಮ್ಮನಗೌಡ್ರ ಇವರು ಇಂದು ಮದ್ಯಾಹ್ನ 4.00ಗಂಟೆಗೆ ಸಾವನ್ನಪಿದ್ದರು. ಅತ್ಯುತ್ತಮ ವಿಮರ್ಶಕ ರಾಗಿದ್ದ ತಿಮ್ಮನಗೌಡ್ರ ಸಾಂಸ್ಕೃತಿಕ ಸಾಹಿತ್ಯಿಕ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ಇವರಿಬ್ವರ ಅಗಲಿಕೆ ಕೊಪ್ಪಳ ಸಾಹಿತ್ಯಿಕ ಲೋಕಕ್ಕೆ ತುಂಬಲಾಗದ ನಷ್ಟ. ಇವರ ನಿಧನಕ್ಕೆ ಕವಿಸಮೂಹ ಕವಿಸಮಯ ಬಳಗ ಸೇರಿದಂತೆ ಜಿಲ್ಲೆಯ ಸಾಹಿತ್ಯಿಕ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ .

Please follow and like us:
error