ಅವ್ವನ ಕನಸು

ಕಂದನಿಗೋಸ್ಕರ ಇನ್ನು ಸಾಗಬೇಕಿದೆ ಬಹುದೂರ
ನನ್ನ ಕಂದನನ್ನು ಬೆಳೆಸಲು , ಭವಿಷ್ಯ ರೂಪಿಸಲು ಸಾಗಬೇಕಿದೆ
ಬಂದ ಕಷ್ಟಗಳೆಲ್ಲವನ್ನು ಕಲ್ಲು-ಸಕ್ಕರೆಯಂತೆ ಎದುರಿಸುತ್ತೇನೆ
ನನ್ನ ಕಂದನ ಬಾಳಿಗೆ ನೆರಳು, ಹೊಟ್ಟೆಗೆ ಚೂರು ಬಿಸಿರೊಟ್ಟಿ
ಕೊಡಲು ನಾ ಸಾಗಬೇಕಿದೆ .
ಬಂದ ಕಷ್ಟ,ಆಯಾಸಗಳೆಲ್ಲವನ್ನು, ಕಂದನ ನಗು ಮರೆಸುತ್ತದೆ
ಭ್ರಷ್ಟಾಚಾರ,ಅಸಮಾನತೆ ತುಂಬುತ್ತಿರುವ ಈ ಜಗದಲ್ಲಿ
ನಾನು ನಿನ್ನ ಕೈ ಹಿಡಿದು ನೆಡಸಬೇಕಿದೆ ಶಿಕ್ಷಿತನಾಗರಿಕವಂತನನ್ನಾಗಿ
ಕಂದ ನೀ ನಗುತಿರು ಬಂದದ್ದೆಲ್ಲಾ ಬರಲಿ ಎದುರಿಸಲು ನಾನಿದ್ದೇನೆ .

-ನಾಗರಾಜನಾಯಕ ಡಿ ಡೊಳ್ಳಿನ
ಕೊಪ್ಪಳ

Please follow and like us:
error

Related posts

Leave a Comment