fbpx

NRC CAA ವಿರುದ್ದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು , ಡಿ . 23 – : ಕೇಂದ್ರ ಸರ್ಕಾರ ಎನ್‌ಆರ್‌ಸಿ , ಸಿಎಎ ಜಾರಿ ಮಾಡಿದರೂ , ಅಗತ್ಯ ದಾಖಲೆ ನೀಡದೆ , ತಿರಸ್ಕರಿಸಬೇಕು ಎಂದು ವಿವಿಧ ಮುಖಂಡರು , ಸಾಮಾಜಿಕ ಹೋರಾಟಗಾರರು ಕರೆ ನೀಡಿದ್ದಾರೆ . ಸೋಮವಾರ ಇಲ್ಲಿನ ಮಿಲ್ಸರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಸಿಎಂ ವಿರುದ್ದದ ಬೃಹತ್ ಸಮಾವೇಶದಲ್ಲಿ , ಸರ್ಕಾರದ ಜನಾಂಗೀಯ ನಿಂದನೆಯ ಸರ್ವೆಗಳನ್ನು ನಾವು ತಿರಸ್ಕರಿಸುವ ಮೂಲಕ , ಮೌನ ಹೋರಾಟ ಮಾಡೋಣ ಎಂದರು .

ಆರಂಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ , ಕೇಂದ್ರ ಸರ್ಕಾರ ನಾಗರಿಕ ಪೌರತ್ವ ಸಾಬೀತುಪಡಿಸಬೇಕು ಎಂದು ಹೇಳುವುದೇ ಮೂರ್ಖತನ . ನಾವು ಏಕೆ ಪೌರತ್ವ ಸಾಬೀತುಪಡಿಸಬೇಕು ಎಂದು ಪ್ರಶ್ನೆ ಮಾಡಿದರು . ಬಿಜೆಪಿಯು ಮುಹಮ್ಮದ್ ಅಲಿ ಜಿನ್ನಾ ಪಾರ್ಟಿ ಎಂದು ಟೀಕಿಸಿದ ಹರ್ಷ ಮಂದರ್ , ರಾಜಕೀಯ ಪಕ್ಷಗಳು ಮತ ಪಡೆಯುವಾಗ ಎಲ್ಲರೂ ನಮ್ಮವರು ಎನ್ನುತ್ತಾರೆ . ಅದಕ್ಕೆ ಪೂರಕವಾಗಿ ಈಗ ಈ ಕಾಯ್ದೆಯ ವಿರುದ್ದ ಎಲ್ಲರೂ ಬೀದಿಗೆ ಇಳಿಯಬೇಕು . ಉದ್ದೇಶಪೂರ್ವಕವಾಗಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ . ಭಯ ಹೋಗಲಾಡಿಲು ರಾಯಕೀಯ ಫಲಾನುಭವಿಗಳು ಕೆಲಸ ಮಾಡಬೇಕು . ಬರೀ ಮುಸ್ಲಿಮರು ಬೀದಿಗೆ ಇಳಿಯುವುದು ಸರಿಯಲ್ಲ . ಇದು ದೇಶದ ಪ್ರತಿಯೊಬ್ಬರ , ಪ್ರಜಾಪ್ರಭುತ್ವದ ಸಮಸ್ಯೆಯಾಗಿದೆ . ಈ ಬಗ್ಗೆ ಜನರಿಗೆ ಅರ್ಥ ಮಾಡಿಸುವ ಕೆಲಸ ತಾಳ್ಮೆಯಿಂದ ಮಾಡಬೇಕಿದೆ ಎಂದರು . ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ವಿ . ಗೋಪಾಲ ಗೌಡ ಮಾತನಾಡಿ , ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದೆ . ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ . ಅಷ್ಟೇ ಅಲ್ಲದೆ , ಡಾ . ಬಿ . ಆರ್ . ಅಂಬೇಡ್ಕರ್ ಎಲ್ಲರಿಗೂ ಒಂದೇ ರೀತಿಯ ಹಕ್ಕು ನೀಡಿದ್ದು , ಕೇಂದ್ರ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಲ್ ಸೆಂಥಿಲ್ , ಮಿಲ್ಲಿ ಕೌನ್ಸಿಲ್ ನ ಮೌಲಾನ ಮುಸ್ತಫ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು .

Please follow and like us:
error
error: Content is protected !!