fbpx

DCM ಕಾರಜೋಳಗೆ ಶಿವನಗೌಡ ನಾಯಕ್ ಆವಾಜ್ ಹಾಕಿದ್ದು ಯಾಕೆ ? 

ರಾಯಚೂರು : DCM ಕಾರಜೋಳಗೆ ಶಾಸಕ ಶಿವನಗೌಡ ನಾಯಕ್​ ಆವಾಜ್ ಹಾಕಿದ ಘಟನೆ ನಿನ್ನೆ ನಡೆದಿ  ರಾಯಚೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್​ ಡಿಸಿಎಂಗೆ ಆವಾಜ್ ಹಾಕಿದ್ದಾರೆ.ನಿನ್ನೆ ವಿಜಯಪುರದ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಮಿತಿ ಸಭೆಯಲ್ಲಿ ಘಟನೆ ನಡೆದಿದ್ದು ನೀರು ಬಿಡುವ ವಿಚಾರದಲ್ಲಿ DCM ಗೆ ಏರುಧ್ವನಿಯಲ್ಲಿ ಆವಾಜ್​ ಹಾಕಿದ್ದಾರೆ. 
ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ ನೀರು ಬಿಡಬೇಕು. ಡ್ಯಾಮ್​ನಿಂದ ಮಾರ್ಚ್​ 25ರಿಂದ 30ರ ವರೆಗೂ ನೀರು ಬಿಡಬೇಕು ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖದ ಮೇಲೆ ಹೊಡಿತಾರೆ ಚೇರ್​ಮೆನ್​ ಆಗಿ ನೀವು ಅಧಿಕಾರಿಗಳಿಗೆ ಹೇಳಿ ನೀರು ಬಿಡಿಸಬೇಕು  ಅಧಿಕಾರಿಗಳು ಹೇಳಿದಂತೆ ನೀವು ಕೇಳುವುದಲ್ಲ ಎಂದು DCMಗೆ ತರಾಟೆ ತೆಗೆದುಕೊಂಡಿದ್ದಾರೆ. ನೀರು ಕಡಿಮೆ ಇದ್ದ ಸಂದರ್ಭದಲ್ಲಿಯೇ ಕಾಲುವೆಗೆ ನೀರು ಬಿಟ್ಟಿದ್ದಾರೆ ಈಗ ಬಿಡದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

Please follow and like us:
error
error: Content is protected !!