ACT1978 ಗೆಲುವು ಕೇವಲ ಒಂದು ಸಿನೆಮಾದ ಗೆಲುವಲ್ಲ

ಬಿ.ಆರ್.ಭಾಸ್ಕರ್ ಪ್ರಸಾದ್

ದಯಮಾಡಿ ಚಿತ್ರ ಮಂದಿರಕ್ಕೆ ಬನ್ನಿ. ನಿಮ್ಮ ಆಗಮನದಿಂದ, ಇದೊಂದು ಸಿನಿಮಾ ಗೆಲ್ಲುವ ಮೂಲಕ ದಕ್ಷಿಣ ಭಾರತದ ಸಹಸ್ರಾರು ಸಹಸ್ರಾರು ಬಡ ಕುಟುಂಬಗಳ ಬಾಳು ಬೆಳಗಲಿ

ನೀವು ಮನಸ್ಸು ಮಾಡಿ ACT1978 ಗೆಲ್ಲಿಸಿದಿರೆಂದರೇ, ಅದು ಕೇವಲ ಒಂದು ಸಿನಿಮಾದ ಗೆಲುವಾಗಿ ಮಾತ್ರ ಉಳಿದುಬಿಡುವ ಸಂದರ್ಭದಲ್ಲಿ ಇವತ್ತು ನಾವಿಲ್ಲ. ಈ ಒಂದು ಸಿನಿಮಾ ಗೆಲ್ಲಿಸುವ ಮೂಲಕ ನೀವು ಸಮಸ್ತ ದಕ್ಷಿಣ ಭಾರತದ ಸಾವಿರಾರು ಕುಟುಂಬಗಳ ಹಸಿದ ಹೊಟ್ಟೆಗೆ ಅನ್ನದ ದಾರಿ ತೋರಿದಿರೆಂದೇ ಅರ್ಥ.
ಯಾಕೆ? ಆಶ್ಚರ್ಯವಾಗುತ್ತಿದೆಯೇ? ಆದರಿದು ಅಕ್ಷರಶಃ ಸತ್ಯ.
ಒಂದು ಸಿನಿಮಾ ACT1978 ಗೆಲ್ಲಿಸುವ ಮೂಲಕ ನೀವು ದಕ್ಷಿಣ ಭಾರತದ ಸಾವಿರಾರು ಕುಟುಂಬಗಳ ಅನ್ನದಾತರಾಗುತ್ತಿರುವುದು ನಿಮಗೇ ಗೊತ್ತಿಲ್ಲದ ಅಪ್ಪಟ ಸತ್ಯ.
ಹೇಗೆ ಅಂತೀರಾ…ಈಗ ನೀವೇ ನೋಡಿ.
ಕಳೆದ 250ಕ್ಕೂ ಹೆಚ್ಚು ದಿನಗಳಿಂದ ಸ್ಥಗಿತಗೊಂಡಿರುವ ಚಿತ್ರ ಮಂದಿರಗಳು ಮತ್ತೆ ಅಧಿಕೃತವಾಗಿ ಪ್ರಾರಂಭವಾಗಿ ಒಂದು ತಿಂಗಳಾದರೂ ಇದುವರೆಗೂ ಯಾರೂ ಕೂಡಾ ತಮ್ಮ ಯಾವುದೇ ಚಿತ್ರ ಬಿಡುಗಡೆ ಮಾಡುವ ದೈರ್ಯ ಮಾಡಿರಲಿಲ್ಲ. ಪ್ರೇಕ್ಷಕರು ಚಿತ್ರ ಮಂದಿರದತ್ತ ತಲೆ ಹಾಕುವ ಮನಸ್ಸು ಮಾಡಿರಲಿಲ್ಲ. ಮತ್ತೆ ಚಿತ್ರ ಮಂದಿರಗಳು ಪ್ರಾರಂಭವಾಗಿ ನಮ್ಮ ತುತ್ತಿನ ಚೀಲದ ತತ್ವಾರಗಳು ಕಳೆಯಿತೆಂದು ನಂಬಿದವರ ಕನಸಿಗೊಂದು ಗರಿ ಮೂಡಿರಲಿಲ್ಲ. ಇದರಿಂದಾಗಿ ಚಲನಚಿತ್ರ ರಂಗವನ್ನೇ ನಂಬಿದ್ದ ದಕ್ಷಿಣ ಭಾರತದ ಸಹಸ್ರಾರು ಕುಟುಂಬಗಳು ಮತ್ತೆ ತಲೆ ಮೇಲೆ ಕೈ ಹೊತ್ತು ಆಕಾಶ ನೋಡುವ ಸ್ಥಿತಿ ಉಂಟಾಗಿದ್ದಾಗಲೇ ACT1978 ಚಿತ್ರ ತಂಡ ತಮ್ಮ ಚಲನಚಿತ್ರವನ್ನು ಬಿಡುಗಡೆ ಮಾಡುವ ದೈರ್ಯ ತೋರಿದೆ. ಚಿತ್ರರಂಗದ ಪ್ರತಿಯೊಬ್ಬ ಸೆಲೆಬ್ರಿಟಿಯನ್ನೂ ಬೇಟಿಯಾಗಿ ಚಿತ್ರ ತೋರಿಸಿ ಒಪಿನಿಯನ್ ಪಡೆದು ಜನರಿಗೆ ತಲುಪಿಸಿ ಚಿತ್ರರಂಗದ ಚಟುವಟಿಕೆಗಳು ಮತ್ತೆ ಚಿಗುರೊಡೆಯುವ ಬರವಸೆ ಮೂಡಿಸಿದೆ. ಚಿತ್ರ ಬಿಡುಗಡೆಗೂ ಮುನ್ನ ಮಾಧ್ಯಮಗಳು ಮತ್ತು ಚಿತ್ರರಂಗದ ದಿಗ್ಗಜರನ್ನೆಲ್ಲಾ ಕರೆದು ಒಂದು ಪ್ರಿಮಿಯರ್ ಶೋ ಏರ್ಪಡಿಸಿ. ಅವರ ಅಭಿಪ್ರಾಯಗಳನ್ನು ಜನರಿಗೆ ತಲುಪಿಸಿ, ಸಾಮಾನ್ಯ ಜನರೂ ತಿಯೇಟರ್ ಕಡೆ ಹೆಜ್ಜೆ ಹಾಕುವ ದೈರ್ಯ, ಬರವಸೆ ಮತ್ತು ಉತ್ಸಾಹ ತುಂಬಿಸುವಲ್ಲಿ ಚಿತ್ರತಂಡ ವಹಿಸಿರುವ ಶ್ರಮಕ್ಕೆ ಎಣೆಯಿಲ್ಲ. ಲಾಭವೋ, ನಷ್ಟವೋ. ಒಳ್ಳೆಯದಾಗುತ್ತೋ, ಕೆಟ್ಟದಾಗುತ್ತೋ. ಮೊದಲು ನಾವೊಂದು ಹೆಜ್ಜೆ ಇಟ್ಟು ಬಿಡೋಣ. ಒಳ್ಳೆಯದಾದರೆ ಅದರ ಫಲ‌ ಎಲ್ಲರಿಗೂ ಇರಲಿ ಎನ್ನುವ ಸದಾಶಯದ ದೈರ್ಯದೊಂದಿಗೆ ಇವತ್ತು ಮಂನ್ಸೋರೆ ಮತ್ತು ತಂಡ ತಮ್ಮ ಚಿತ್ರ ಬಿಡುಗಡೆ ಮಾಡಿಬಿಟ್ಟಿದೆ. ಚಿತ್ರರಂಗವನ್ನೇ ನಂಬಿ ಕುಳಿತಿರುವ ಅಸಂಖ್ಯಾತ ಮನಸ್ಸುಗಳು ಈ ಚಿತ್ರವೊಂದು ಗೆಲ್ಲುವ ಮೂಲಕ ಇನ್ನು ಇಂತಹ ನೂರಾರು ಚಿತ್ರಗಳು ಬಿಡುಗಡೆಯಾಗುವ ಮನಸ್ಸು ಮಾಡಲಿ. ಆ ಮೂಲಕ ನಮ್ಮ ಕಷ್ಟದ ದಿನಗಳೆಲ್ಲಾ ಕಳೆದು ಹೋಗಲೆಂದು ತರತರದ ಹರಕೆ ಹೊತ್ತು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇವರ ಕನಸು ನಷ್ಟವಾಗದಿರಲಿ. ಇವರೆಲ್ಲರ ಆಸೆ, ತವಕ, ಅಗತ್ಯಗಳು ಈಡೇರಲಿ. ಬಹುಶಃ ಇದೊಂದು ಸಿನಿಮಾ ಗೆಲ್ಲದೆ ಹೋದರೆ ಸೋಲುವುದು ಕೇವಲ ಇದೊಂದು ಚಿತ್ರ ಮಾತ್ರವಲ್ಲ. ಸೋತು ಬಸವಳಿದು ಹೋಗುವುದು ಸಹಸ್ರಾರು ಬದಕುಗಳು. ಮತ್ತೆ ಈ ದುರಿತ ಕಾಲದಲ್ಲಿ ಯಾರೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದೆ ಬರುವುದು ಅಷ್ಟು ಸುಲಭದ ಮಾತಾಗಿ ಉಳಿಯೋದಿಲ್ಲ. ಅಲ್ಲಿಗೆ. ಚಿತ್ರರಂಗ ಮತ್ತೊಂದು ಅನಾಹುತಕ್ಕೆ ಈಡಾಗದಿರದು. ಮತ್ತಷ್ಟು ದಿನಗಳು ಚಿತ್ರರಂಗದ ಕೂಲಿ ಕಾರ್ಮಿಕರಿಂದ ಹಿಡಿದು, ಜೂನಿಯರ್ ಆಕ್ಟರ್‌ಗಳೂ ಸೇರಿದಂತೆ ನಿರ್ಮಾಪಕರವರೆಗೂ ಇದರ ಬಿಸಿ ತಟ್ಟುವುದು ಸುಳ್ಳಲ್ಲ. ಅದೆಷ್ಟೋ ಜನ ಕಲಾವಿದರು ಇವತ್ತು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕೆಲಸವಿಲ್ಲದೆ, ದುಡಿಮೆಯಿಲ್ಲದೆ. ನರಳುತ್ತಿದ್ದಾರೆ. ಈ ನರಳಾಟ ಇನ್ನಷ್ಟು ದಿನ ಮುಂದುವರೆಯಬೇಕೇನು? ಅದರ ಬದಲು. ಇದೊಂದು ಸಿನಿಮಾ ಗೆಲ್ಲಿಸಿ ನೋಡಿ.
ACT1978 ಗೆಲ್ಲೋದಂದರೆ ಅದು ಸಹಸ್ರಾರು ಕುಟುಂಬಗಳ ಬದುಕು ಗೆದ್ದಂತೆ. ಆ ಗೆಲುವು ತಂದುಕೊಟ್ಟ ಭಾಗ್ಯ ನಿಮ್ಮದಾಗಲಿ. ಮರೆಯದೆ ಮಾಸ್ಕ್ ದರಿಸಿ, ಸ್ಯಾನಿಟೈಸರ್ ಬಳಸಿ. ಅಂತರ ಕಾಪಾಡಿಕೊಂಡು ದೈರ್ಯವಾಗಿ ಚಿತ್ರಮಂದಿರಕ್ಕೆ ಹೋಗಿ ಬನ್ನಿ. ಬಸ್ಸು, ರೈಲು, ಪೇಟೆ, ಸಂತೆಗಳಲ್ಲಿ ಬರದ ಕರೋನಾ ತಿಯೇಟರ್‌ನಲ್ಲಿ ಮಾತ್ರ ಕದ್ದು ಕೂತಿಲ್ಲ. ತಿಯೇಟರ್‌ಗಳನ್ನೂ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುತ್ತದೆ. ಸ್ವಲ್ಪ ಎಚ್ಚರಿಕೆ ವಹಿಸಿ. ದಯಮಾಡಿ ಚಿತ್ರ ಮಂದಿರಕ್ಕೆ ಬನ್ನಿ. ನಿಮ್ಮ ಆಗಮನದಿಂದ, ಇದೊಂದು ಸಿನಿಮಾ ಗೆಲ್ಲುವ ಮೂಲಕ ದಕ್ಷಿಣ ಭಾರತದ ಸಹಸ್ರಾರು ಸಹಸ್ರಾರು ಬಡ ಕುಟುಂಬಗಳ ಬಾಳು ಬೆಳಗಲಿ.
ಧನ್ಯವಾದಗಳು.

  • ಬಿ.ಆರ್.ಭಾಸ್ಕರ್ ಪ್ರಸಾದ್
Please follow and like us:
error