ನಿರ್ಣಾಯಕ ಘಟ್ಟದಲ್ಲಿ ಎಸ್ಟಿ ಹೋರಾಟ, ಸಿದ್ದರಾಮಯ್ಯನವರಿಂದ ದಾರಿ ತಪ್ಪಿಸುವ ಕೆಲಸ-ಕೆ.ವಿರುಪಾಕ್ಷಪ್ಪ

ಕೊಪ್ಪಳ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತರ ಪರವಾಗಿ ಹೋರಾಟಕ್ಕಿಳಿಯುವ ಬಗ್ಗೆ ಹೇಳಿದ್ದು. ಜನರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಎಸ್‍ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಆರೋಪಿಸಿದರು.
     ಅವರು  ಶುಕ್ರವಾರ   ಸುದ್ದಿಗಾರರೊಂದಿಗೆ ಮಾತನಾಡಿದ

ಅವರು,  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 5 ವರ್ಷದಲ್ಲಿ ಹಿಂದುಳಿದವರು ಯಾರು ಎಂದು ಗೊತ್ತಾಗಲಿಲ್ಲವೇ? ರಾಜಕೀಯದಲ್ಲಿ ಮನುಷ್ಯ ಯಾವ ರೀತಿಯಲ್ಲಿ ಬದಲಾಗಬಹುದು ಎನ್ನುವುದು ಸಿದ್ರಾಮಯ್ಯ ಉದಾಹರಣೆಯಾಗಿದ್ದಾರೆ. ಕುರುಬ ಸಮಾಜದ ಬೆಂಬಲದಿಂದಲೇ ಅಧಿಕಾರ ಅನುಭವಿಸಿದರು. ಸಮಾಜವಾದ ತತ್ವ ಇದ್ದರೆ ಸುಮ್ಮನಿರಲಿ. ಆದರೆ  ಬೆರೆ ಬೇರೆ  ಗೊಂದಲದ ಹೇಳಿಕೆ ನೀಡಿ ಹೋರಾಟದ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದು ಸರಿಯಲ್ಲ. ಜನರಿದ್ದರೆ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಸಮಾವೇಶದಲ್ಲಿ ಭಾಗವಹಿಸಿದ್ದ 7-8 ಲಕ್ಷ ಜನ ಕುರುಬರು ಅವರಿಗೆ ಕಾಣಲಿಲ್ಲವೇ? ಎಂದು ಹರಿಹಾಯ್ದರು.

 ಶೀಘ್ರವೇ ಸಿಎಂ ಬೇಟಿ:

    ಕುರುಬರ  ಸಮಾಜದ ಎಸ್‍ಟಿ ಹೋರಾಟ ನಿರ್ಣಾಯಕ ಘಟ್ಟ ತಲುಪಿದ್ದು, ಶೀಘ್ರವೇ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಒತ್ತಾಯಿಸಲಾಗುವುದು  ಎಂದು ಹೇಳಿದ ಅವರು, ಫೆ -7 ರಂದು ಬೆಂಗಳೂರಿನಲ್ಲಿ ನಡೆದ ಎಸ್ಟಿ ಹೋರಾಟ ಸಮಿತಿ ಸಮಾವೇಶದಲ್ಲಿ 7-8  ಲಕ್ಷಕ್ಕೂ ಅಧಿಕ ಸಮಾಜದ ಜನ ಭಾಗವಹಿಸುವ ಮೂಲಕ ರಾಜಧಾನಿಯಲ್ಲಿ ಹೊಸ ಇತಿಹಾಸ ಬರೆದಿದೆ.  ಬೆಂಗಳೂರಿನಲ್ಲಿ  ನಡೆದ  ಸಭೆ  ಸಮಾವೇಶ  ಹೋರಾಟ  ಸೇರಿದಂತೆ  ಯಾವುದೇ  ಕಾರ್ಯಕ್ರಮಕ್ಕೂ ಒಂದು ಲಕ್ಷಕ್ಕೂ ಅಧಿಕ ಜನರ  ಬರುತ್ತಿದ್ದರು.  ಆದರೆ ನಮ್ಮ ಸಮಾವೇಶಕ್ಕೆ  ನಾವು ಗಾಡಿ ಕೊಟ್ಟಿಲ್ಲ. ಹಣ ನೀಡಿಲ್ಲ ಕುರುಬ  ಸಮಾಜ  ಎಸ್‍ಟಿಗೆ ಸೇರಲೇಬೇಕು ಎನ್ನುವ ಮಹತ್ವ ಕಾಂಕ್ಷಿಯೊಂದಿಗೆ ಊಟ, ಸಿಹಿ ತಿನಿಸುಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದ್ದರು. ಐತಿಹಾಸಿಕ ಸಮಾವೇಶದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ರಾಜ್ಯಾಧ್ಯಕ್ಷನಾಗಿ ಧನ್ಯವಾದ ತಿಳಿಸುವೆ ಎಂದರು.
      ಅದರಂತೆ  ಫೆ. 10ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಕೇಂದ್ರದ ಬುಡಕಟ್ಟು  ಸಚಿವ ( ಟ್ರೈಬಲ್ ಮಿನಿಸ್ಟರ್ ) ಭೇಟಿಗೆ ಸಮಯ ನೀಡಿದ್ದರು. ಆದರೆ ತಾವು ಸಿಂಧನೂರಿನಲ್ಲಿರುವುದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ಸಮಯ ನಿಗದಿ ಮಾಡುವಂತೆ ಮನವಿ ಮಾಡಿದ್ದೇವೆ. ಜೊತೆಗೆ ಶೀಘ್ರವೇ ಮುಖ್ಯಮಂತ್ರಿಗಳನ್ನು ಸಹ ಬೇಟಿಯಾಗಿ  ಕೇಂದ್ರಕ್ಕೆ  ಶಿಫಾರಸ್ಸು  ಮಾಡುವಂತೆ  ಮನವಿ  ಮಾಡುತ್ತೇವೆ. ಅದರಂತೆ  ನಂತರ  ಪ್ರಧಾನಿ ಮೋದಿಯವರನ್ನು  ಬೇಟಿಯಾಗುವ  ಉದ್ದೇಶವಿದೆ.  ಕೇಂದ್ರ  ಹಾಗೂ  ರಾಜ್ಯ  ಸರಕಾರಗಳ  ಪ್ರತಿಕ್ರೀಯೆ  ನೋಡಿಕೊಂಡು  ಮುಂದಿನ  ಹೋರಾಟದ ರೂಪರೇಷಗಳನ್ನು  ಸಿದ್ದಪಡಿಸಲಾಗುವುದು  ಎಂದರು.
 ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಿರುಪಾಕ್ಷಪ್ಪ  ಮೋರನಾಳ, ಯಮನಪ್ಪ ವಡ್ಡಟ್ಟಿ, ಕುಮಾರ ಮಜ್ಜಗಿ, ತಾ.ಪಂ.ಸದಸ್ಯ ಮೂರ್ತೆಪ್ಪ ಹಿಟ್ನಾಳ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error