ಕೊಪ್ಪಳ ಜಿಲ್ಲೆ ಇಂದು 84 ಕೊರೋನಾ ಪಾಸಿಟಿವ್- ಇದುವರೆಗೆ ೭೯೩ ಜನ ಡಿಸ್ಚಾರ್ಜ

ಕೊಪ್ಪಳ: ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜಿಲ್ಲೆಯಲ್ಲಿ ಶನಿವಾರ 84 ಕೊರೋನಾ ಸೋಂಕಿನ ಕೇಸ್‌ಗಳು ದಾಖಲಾಗಿವೆ. ಗಂಗಾವತಿ ತಾಲೂಕಿನಲ್ಲಿ 36, ಕೊಪ್ಪಳ ತಾಲೂಕಿನಲ್ಲಿ 26, ಕುಷ್ಟಗಿ ತಾಲೂಕಿನಲ್ಲಿ 12 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 10 ಕೇಸ್‌ಗಳು ಪತ್ತೆಯಾಗಿವೆ. ಸೋಂಕಿಗೆ ತುತ್ತಾದವರ ಪೈಕಿ ಇಂದು 36 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 1,278 ಕೇಸ್‌ಗಳ ಪೈಕಿ 793 ಜನ ಗುಣಮುಖರಾಗಿದ್ದಾರೆ. 26 ಜನ ಮೃತಪಟ್ಟಿದ್ದು, 409 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Please follow and like us:
error