ಕಲಬುರಗಿ 8 ತಿಂಗಳಿನ ಹೆಣ್ಣು‌ ಮಗು ಸೇರಿ 16 ಜನರಿಗೆ ಕೊರೋನಾ ಸೋಂಕು‌ ಪತ್ತೆ

ಕಲಬುರಗಿ.: ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯಿಂದ 8 ತಿಂಗಳಿನ ಹೆಣ್ಣು‌ ಮಗು ಸೇರಿದಂತೆ ಜಿಲ್ಲೆಯ 16 ಜನರಿಗೆ ಕೊರೋನಾ ಸೋಂಕು‌ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 796ಕ್ಕೆ ಹೆಚ್ಚಳವಾಗಿದ್ದು, 285 ಗುಣಮುಖರಾಗಿದ್ದಾರೆ. 8 ಜನ ನಿಧನಗೊಂಡಿದ್ದರೆ 503 ಜನರು ಸಕ್ರೀಯ ರೋಗಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸೇಡಂ ತಾಲೂಕಿನ‌ ಕೊಟಪಲ್ಲಿ ಗ್ರಾಮದ 23 ವರ್ಷದ ಯುವಕ(P-6176) ಮತ್ತು 21 ವರ್ಷದ ಯುವಕ(P-6177) ಕೊರೋನಾ ಸೋಂಕು ಕಂಡು ಬಂದಿದೆ.

ಕಲಬುರಗಿ ತಾಲೂಕಿನ ಹರಸೂರ ಗ್ರಾಮದ 8 ತಿಂಗಳ ಹೆಣ್ಣು ಮಗು (P-6178), 21 ವರ್ಷದ ಯುವತಿ (P-6179) ಹಾಗೂ 3 ವರ್ಷದ ಹೆಣ್ಣು ಮಗು (P-6180), ಪಾಣೆಗಾಂವ ಗ್ರಾಮದ 20 ವರ್ಷದ ಯುವತಿ (P-6181) ಮತ್ತು 5 ವರ್ಷದ ಬಾಲಕ (P-6182), ಖಣದಾಳ ಗ್ರಾಮದ 14 ವರ್ಷದ ಬಾಲಕಿಗೆ (P-6184) ಕೊರೋನಾ ಸೋಂಕು ದೃಢವಾಗಿದೆ.

ಕಲಬುರಗಿ ನಗರದ ಭರತ ನಗರ ಪ್ರದೇಶದ 26 ವರ್ಷದ ಯುವತಿ (P-6185), ಇಸ್ಲಾಮಾಬಾದ ಕಾಲೋನಿಯ 29 ವರ್ಷದ ಯುವತಿ (P-6186) ಹಾಗೂ ಬಸವ ನಗರದ 35 ವರ್ಷದ ಯುವತಿಗೂ (P-6189) ಕೊರೋನಾ ತಗುಲಿದೆ.

ಶಹಾಬಾದ ತಾಲೂಕಿನ ಮುಗುಳನಾಗಾಂವ ಗ್ರಾಮದ 60 ವರ್ಷದ ವೃದ್ಧ (P-6183) ಮತ್ತು ಶಹಾಬಾದ ಪಟ್ಟಣದ ನಿಜಾಮ್ ಬಜಾರ್ ಪ್ರದೇಶದ 14 ವರ್ಷದ ಬಾಲಕ(P-6190), ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ 5 ವರ್ಷದ ಗಂಡು ಮಗು (P-6191), ಕಮಲಾಪುರ ತಾಲೂಕಿನ ದೇವಲು ನಾಯಕ್ ತಾಂಡಾದ 6 ವರ್ಷದ ಬಾಲಕಿ (P-6177) ಮತ್ತು 40 ವರ್ಷದ ಪುರುಷನಿಗೆ (P-6188) ಕೋವಿಡ್-19 ಸೊಂಕು ಅಂಟಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು

Please follow and like us:
error