ಬೆಂಗಳೂರು : ರಾಜ್ಯಾದ್ಯಂತ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಇಂದು ನಡೆಯುತ್ತಿದ್ದು ನೀರಸ ಮತದಾನ ನಡೆಯುತ್ತಿದೆ. ಚಳಿಯ ಕಾರಣಕ್ಕೆ ಮತದಾನದಲ್ಲಿ ಬಿರುಸು ಕಂಡುಬಂದಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಚಿಹ್ನೆ ಬದಲಾಗಿ ಗೊಂದಲ ಮೂಡಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಮತದಾರರು ವಾಪಸ್ ಹೋಗಿದ್ದಾರೆ. ಹುಬ್ಬಳ್ಳಿಯ ಲ್ಲಿ ಕಟ್ಟೂರ್ ನಲ್ಲಿ ಈವರೆಗೆ ಮತದಾನ ಆರಂಭವಾಗಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ ೨೬% ಮತದಾನವಾಗಿದೆ.

Please follow and like us: