2ಎ ಮೀಸಲಾತಿ ಬೇಡಿಕೆ ಈಡೇರದಿದ್ದರೆ ಕ್ರಾಂತಿಯ ಹೋರಾಟ- ವಿಜಯ ಕಾಶಪ್ಪನವರ್ ಎಚ್ಚರಿಕೆ


ಕೊಪ್ಪಳ : ಪಂಚಮಸಾಲಿ ಮೀಸಲಾತಿ ಹೋರಾಟ ಕಳೆದ 26 ವರ್ಷಗಳಿಂದ ನಡೆದಿದೆ. ಈಗಾಗಲೇ ಮೂರು ಹಂತದ ಹೋರಾಟವಾಗಿದೆ. ಇದು ನಾಲ್ಕನೇ ಹಂತದ ಕೊನೆಯ ಹೋರಾಟ ಪಾದಯಾತ್ರೆ . ಇದು ಅಂತಿಮ ಹೋರಾಟ ಮಾಡು ಇಲ್ಲವೆ ಮಡಿ ಎನ್ನುವಂತಹ ಹೋರಾಟ. ಜೀವವಾದರೂ ಕಳೆದುಕೊಳ್ಳುತ್ತೇವೆ ಆದರೆ ಮೀಸಲಾತಿಯನ್ನು ಬಿಡುವುದಿಲ್ಲ ಎಂದು ಮಾಜಿ ಶಾಸಕ , ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಇಂದು ಕೊಪ್ಪಳದಲ್ಲಿ ನಡೆದ ಪಾದಯಾತ್ರೆ ಪೂರ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೋರಾಟ ಯಾವುದೇ ಹಂತಕ್ಕೆ ಹೋಗಲಿ. ಶಾಂತಿಯುವಾಗಿ ಹೋರಾಟ ನಡೆಯುತ್ತಿದೆ. ಮುಂದೆ ಕ್ರಾಂತಿಯಾಗುತ್ತೆ ಬೆಂಗಳೂರು ಮುಟ್ಟುವುದರಲ್ಲಿ ಘೋಷಣೆ ಮಾಡದೇ ಹೋದರೆ ಕ್ರಾಂತಿಯ ರೂಪ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ನಾವು ಕೇಳುತ್ತಿರುವುದು ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿಯನ್ನು ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲ. ಗೋವಿಂದ ಕಾರಜೋಳ ತಮ್ಮ ಸಮುದಾಯಕ್ಕೆ ಮೀಸಲಾತಿಯನ್ನು ಪಡೆದುಕೊಂಡಿದ್ದಾರೆ ನಾವು ಅವರ ಬಗ್ಗೆ ಮಾತನಾಡುವುದಿಲ್ಲ . ನಮಗೆ ಮೀಸಲಾತಿ ಬೇಕಾಗಿದೆ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಕಾರಜೋಳ ಗೆಲುವಿನಲ್ಲೂ ಪಂಚಮಸಾಲಿ ಸಮಾಜದ ಬಹುಪಾಲಿದೆ. ಯಡಿಯೂರಪ್ಪ ಸರಕಾರ ರಚನೆಯಾಗಿರುವುದು 15ಜನ ಪಂಚಮಸಾಲಿ ಸಮಾಜದ ಶಾಸಕರು ಮತ್ತು ಪಂಚಮಸಾಲಿ ಸಮಾಜದಿಂದ ಎಂದು ಹೇಳಿದರು .

Please follow and like us:
error