16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ

ಕನ್ನಡನೆಟ್ ನ್ಯೂಸ್ : ಭಾಗ್ಯನಗರದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದ , ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡ ( LPC ) ಆರೋಪಿತನನ್ನು ಕೊಪ್ಪಳ ಪೋಲಿಸರು ಬಂದಿಸಿದ್ದಾರೆ.

ಭಾಗ್ಯನಗರದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಲಪಟಾಯಿಸಿ , ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಪ್ಪಳ ಪೋಲಿಸರು ಬಂದಿಸಿದ್ದಾರೆ. 2003ರಲ್ಲಿ ಭಾಗ್ಯನಗರದ   ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ಸಬ್ ಸೆಂಟರ್ನಲ್ಲಿ  ಜ್ಯೂನಿಯರ್ ಅಸಿಸ್ಟಂಟ ಕೆಲಸ ಮಾಡುತ್ತಿದ್ದ  ಹಾಸನ ಮೂಲದ ಜಿ.ಮಂಜುನಾಥ 2002 ರಿಂದ ಜುಲೈ 2003 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಒಟ್ಟು 16 , ಬೇಲ್ಸ್‌ಗಳು ಅಂದಾಜು  2,12,100 ಬೆಲೆಯ ವಸ್ತುಗಳನ್ನು  ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿದ್ದರ ಕುರಿತು  ಕೆ.ಎಕ್ಸ್ , ಥಾಮಸ್ , ಯೋಜನಾ ಆಡಳಿತಾಧಿಕಾರಿ 30-07-2005 ರಂದು ದೂರು ನೀಡಿದ್ದರು. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ  2005ರಲ್ಲಿ ದೂರು ದಾಖಲಾಗಿತ್ತು.  ಪ್ರಕರಣದ ತನಿಖೆ ಮಾಡಿ 2010ರಲ್ಲಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. 2011ರಲ್ಲಿ ಪ್ರಕರಣವನ್ನು ಎಲ್ ಪಿಸಿಎಂದು ಘೋಷಣೆ ಮಾಡಲಾಗಿತ್ತು. ಇತ್ತೀಚಿಗೆ ನಗರದ ಸಿಪಿಐ ಮಾರುತಿ ಗುಳ್ಳಾರಿಯವರ ನೇತೃತ್ವದ   ನಾಗಪ್ಪ ಪಿ.ಎಸ್.ಐ ( ಕಾ & ಸು ) ., ಸೂರ್ಯಕಾಂತಪ್ಪ ಸಿಹೆಚಸಿ . ರಾಜಶೇಖರ ಹೆಚಸಿ  ತಂಡ ಆರೋಪಿಯ ಜಾಡನ್ನು ಹಿಡಿದು ಬೆಂಗಳೂರಿಗೆ ತೆರಳಿತ್ತು. ಕೊನೆಗೂ ಜಯನಗರದಲ್ಲಿ ಇದ್ದ ಆರೋಪಿತನನ್ನು ಬಂದಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಗಕ್ಕೆ ಎಸ್ಪಿ ಟಿ.ಶ‍್ರಿಧರ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಕರಣದ ವಿವರ : ದಿ. 30-07-2005 ರಂದು ಕೆ.ಎಕ್ಸ್ , ಥಾಮಸ್ , ಯೋಜನಾ ಆಡಳಿತಾಧಿಕಾರಿ , ಕೈ ಮಗ್ಗ ಅಭಿವೃದ್ಧಿ ನಿಗಮ ಭಾಗ್ಯನಗರ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು , ಆರೋಪಿತನಾದ ಜಿ . ಮಂಜುನಾಥ ಜ್ಯೂನಿಯರ್ ಅಸಿಸ್ಟಂಟ್ , ಸಬ್ ಸೆಂಟರ್ ಭಾಗ್ಯನಗರ , ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ 2002 ರಿಂದ ಜುಲೈ 2003 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಒಟ್ಟು 16 , ಬೇಲ್ಸ್‌ಗಳು ಅಂ.ಕಿ.ರೂ : 2,12,100 = 00 ಬೆಲೆ ಬಾಳುವುದನ್ನು ಅಪರಾಧ ನಂಬಿಕೆ ದ್ರೋಹ ಮಾಡಿ , ವಂಚನೆ ಮಾಡಿದ್ದು ಇರುತ್ತದೆ ಅಂತಾ ಇರುವ ಫಿಲ್ಯಾದಿಯ ಸಾರಾಂಶದ ಮೇಲಿಂದ ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ : 150/2005 ಕಲಂ : 408,409,420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು

ಹಿಂದಿನ ತನಿಖಾಧಿಕಾರಿಯವರು ಆರೋಪಿತನಾದ ಜಿ . ಮಂಜುನಾಥ ತಂದೆ ಗುಂಡಪ್ಪ ವಯಾ 50 ವರ್ಷ ಜಾ : ಮಧ್ಯಮ ಬ್ರಾಹ್ಮಣ ಉ : ಜ್ಯೂನಿಯರ್ ಅಸಿಸ್ಟಂಟ್ , ಸಬ್ ಸೆಂಟರ್ ಭಾಗ್ಯನಗರ , ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ಸಾ : ಗೋರೂರ ಜಿ : ಹಾಸನ ಮೇಲೆ ದಿ: 10-08-2010 ರಂದು ಪರಾರಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು , ಸಿಸಿ ನಂ : 348/2010 ಇದ್ದು , ಸದರಿ ಆರೋಪಿತನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಇರುತ್ತದೆ . ಕಾರಣ ಪ್ರಕರಣವನ್ನು ನ್ಯಾಯಾಲಯವು ದಿನಾಂಕ : 18-11-2011 ರಂದು ಎಲ್.ಪಿ.ಸಿ. ಪ್ರಕರಣ ಅಂತಾ ಆದೇಶ ಹೊರಡಿಸಿದ್ದು , ಎಲ್.ಪಿ.ಸಿ ನಂ : 01/2016 ಇರುತ್ತದೆ . ಸದರ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿತನಾದ ಜಿ . ಮಂಜುನಾಥ ತಂದೆ ಗುಂಡಪ್ಪ ಈತನ ಪತ್ತೆ ಕುರಿತು ಶ್ರೀಧರ ಟಿ . ಎಸ್.ಪಿ. , ಸೂಚನೆ ಮೇರೆಗೆ ವೆಂಕಟಪ್ಪ ನಾಯಕ ಡಿ.ಎಸ್.ಪಿ ಕೊಪ್ಪಳರವರ ಮಾರ್ಗದರ್ಶನದಂತೆ . ಮಾರುತಿ ಗುಳ್ಳಾರಿ ಪಿ.ಐ. ಕೊಪ್ಪಳ ನಗರ ಪೊಲೀಸ್ ಠಾಣೆರವರ ನೇತೃತ್ವದಲ್ಲಿ . ನಾಗಪ್ಪ ಪಿ.ಎಸ್.ಐ ( ಕಾ & ಸು ) ., ಸೂರ್ಯಕಾಂತಪ್ಪ ಸಿಹೆಚಸಿ -183 . ರಾಜಶೇಖರ ಹೆಚಸಿ -43 , ರವರ ತಂಡವು ಸದರ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿತನು ಸಧ್ಯ ಎಲ್.ಐ.ಸಿ. ಕಾಲೋನಿ , 3 ನೇ ಬ್ಲಾಕ್ , ಈಸ್ಟ್ ಜಯನಗರ ಬೆಂಗಳೂರಿನಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ನಿನ್ನೆ ದಿನಾಂಕ : 26-03-2021 ರಂದು ಸಂಜೆ 5-00 ಗಂಟೆಗೆ ಅವನ ಮನೆಯಲ್ಲಿ ವಶಕ್ಕೆ ಪಡೆದುಕೊಂಡು ಬಂದು ದಿ: 27-03-2021 ರಂದು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ . ಸದರ ಪ್ರಕರಣದಲ್ಲಿನ ಆರೋಪಿತನಾದ ಜಿ . ಮಂಜುನಾಥ ತಂದೆ ಗುಂಡಪ್ಪ ಎಲ್.ಐ.ಸಿ. ಕಾಲೋನಿ , 3 ನೇ ಬ್ಲಾಕ್ , ಈಸ್ಟ್ ಜಯನಗರ ಬೆಂಗಳೂರ ಈತನು ಸುಮಾರು ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿತನನ್ನು ಪತ್ತೆ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳರವರು ಶ್ಲಾಘನೆ ಮಾಡಿರುತ್ತಾರೆ

Please follow and like us:
error